Sunday, June 21, 2026
spot_imgspot_img
spot_imgspot_img

ಕೋಲ್ಪೆ ಜ.3 ರಿಂದ 5 ತನಕ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

- Advertisement -
- Advertisement -

ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ.3 ರಿಂದ ಜ.5 ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಜ.3 ರಂದು ಬೆಳಿಗ್ಗೆ 9 ಗಂಟೆಗೆ 108 ಕಾಯಿ ಗಣಪತಿ ಹವನ ಮಧ್ಯಾಹ್ನ 12 ಗಂಟೆಗೆ ಗಣಪತಿ ಹವನ ಪೂರ್ಣಾಹುತಿ, ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.ಜ. 4 ರಂದು ಬೆಳಿಗ್ಗೆ 6 ರಿಂದ ಸಂಜೆ 6 ತನಕ ಅರ್ಧ ಏಕಾಹ ಭಜನೆ ಬೆಳಿಗ್ಗೆ 8 ಗಂಟೆಗೆ ಆಶ್ಲೇಷಾ ಬಲಿ,ಬೆಳಿಗ್ಗೆ 11 ಗಂಟೆಗೆ ತುಲಾಭಾರ ಮಧ್ಯಾಹ್ನ 12:30 ಮಹಾಪೂಜೆ ಅನ್ನಸಂತರ್ಪಣೆ ರಾತ್ರಿ 8 ಗಂಟೆಯಿಂದ ಪಂಚಮಿ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ಜ.5 ರಂದು ಬೆಳಿಗ್ಗೆ 9 ಗಂಟೆಗೆ ದೇವರ ಬಲಿ ಹೊರಡುವುದು,ಬೆಳಿಗ್ಗೆ 10 ರಿಂದ ದರ್ಶನ ಬಲಿ ಬಟ್ಟಲು ಕಾಣಿಕೆ, ಗಂಧ ಪ್ರಸಾದ ಸ್ಥಳ ದೈವ ಪಿಲಿಚಾಮುಂಡಿ ನೇಮೋತ್ಸವ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!