Monday, July 27, 2026
spot_imgspot_img
spot_imgspot_img

ಇಳಿ ಸಂಜೆಯಲಿ ಅನುಷ್ಕಾ ಶರ್ಮಾ ಜೊತೆ ರೊಮ್ಯಾಂಟಿಕ್ ಮೂಡ್‍ನಲ್ಲಿ ವಿರಾಟ್ ಕೊಹ್ಲಿ

- Advertisement -
- Advertisement -

ಅಬುಧಾಬಿ:  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‍ನಲ್ಲಿ ಭಾನುವಾರ ನಡೆದ ಪಂದ್ಯವನ್ನು ಗೆದ್ದು ಬೀಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಜೊತೆ ನೀರಿನೊಳಗೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ನಂತರ ರೊಮ್ಯಾಂಟಿಕ್ ಮೂಡಿಗೆ ಜಾರಿರುವ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಇಳಿ ಸಂಜೆಯಲಿ ನೀರಿನೊಳಗೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋ ತೆಗೆದಿದ್ದು, ಬೆಂಗಳೂರು ತಂಡದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಎಂದು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಅನುಷ್ಕಾ ಶರ್ಮಾ ಅವರು ದುಬೈನಲ್ಲೇ ಇದ್ದಾರೆ. ಜೊತೆಗೆ ಕಳೆದ ಮೂರು ಪಂದ್ಯಗಳಲ್ಲಿ ಬೆಂಗಳೂರು ತಂಡವನ್ನು ಮೈದಾನಕ್ಕೆ ಬಂದು ಹುರಿದುಂಬಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲೂ ಕೂಡ ಅನುಷ್ಕಾ ಶರ್ಮಾ ಹಾಜರಿದ್ದು, ಪತಿಯ ತಂಡಕ್ಕೆ ಚೀಯರ್ ಮಾಡಿದ್ದರು.

- Advertisement -

Related news

error: Content is protected !!