ಬಂಟ್ವಾಳ : ಇಡ್ಕಿದು ಸೇವಾ ಸಹಕಾರಿ ಸಂಘ ನಿ. 3628 ಇದರ ವತಿಯಿಂದ “ಆರೋಗ್ಯಾಮೃತ ಯೋಜನೆ” ಅಡಿಯಲ್ಲಿ ಜನಸೇವಾ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭವು ಮಾರ್ಚ್ 19, 2026 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಉರಿಮಜಲು ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿ, ಕಬಕ ಸಮೀಪದ ಅಡ್ಯಾಲುಕರೆ ಶಾಖೆಯ ‘ಪಂಚಾಮೃತ ಸಭಾಭವನ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಚಿಕಿತ್ಸಾ ಕೇಂದ್ರದ ಮೂಲಕ ಸ್ಥಳೀಯ ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶವಾಗಿದೆ.

ಈ ಕೇಂದ್ರದಲ್ಲಿ ಪ್ರಸಿದ್ಧ ವೈದ್ಯರಾದ ಡಾ. ಜಯಪ್ರಕಾಶ್ ಕೊಂಕೋಡಿ (MBBS, MD, DM) ಅವರು ಸಾಮಾನ್ಯ ರೋಗ ಹಾಗೂ ತುರ್ತು ಚಿಕಿತ್ಸಾ ತಜ್ಞರಾಗಿ ಸೇವೆ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಆದರ್ಶ ಆಸ್ಪತ್ರೆ ಪುತ್ತೂರಿನ ಖ್ಯಾತ ಸರ್ಜನ್ ಡಾ. ಎಂ. ಕೆ. ಪ್ರಸಾದ್ ಹಾಗೂ ಹೃದ್ರೋಗ ತಜ್ಞ ಡಾ. ಸುರೇಶ್ ಪುತ್ತೂರಾಯ ಭಾಗವಹಿಸಲಿದ್ದಾರೆ.
ಸಂಘದ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ಸೇರಿದಂತೆ ನಿರ್ದೇಶಕರು, ನಾಮ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜನಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘವು ಮನವಿ ಮಾಡಿದೆ.











