Monday, April 15, 2024
spot_imgspot_img
spot_imgspot_img

ದುಸ್ಥಿತಿಯ ರಗಳೆಗಳು:- ರಾಧಾಕೃಷ್ಣ ಎರುಂಬು. ರಾಮ್-ದೇವ್ ವಿಟ್ಲ.

- Advertisement -G L Acharya panikkar
- Advertisement -

(ಚಿತ್ರ ಕೃಪೆ : ಅಂತರ್ಜಾಲ)

ದುಸ್ಥಿತಿಯ ರಗಳೆಗಳು

ಮಾನವನ ಬದುಕಿನಲ್ಲಿ ಕೌಶಲ್ಯ ವೆನ್ನುವುದು ಪ್ರಧಾನವಾದ ಬದಲಾವಣೆ ತರುವುದು. ಅದು ಬಡತನವನ್ನು ಸಿರಿತನ ವಾಗಿಸುವುದು. ಕೆಲವೊಮ್ಮೆ ಅಪ್ರಾಯೋಗಿತ ಕೌಶಲ್ಯ ಬಡತನ ವನ್ನು ತರುವುದು. ಎಲ್ಲರ ನಿತ್ಯ ಜೀವನದಲ್ಲಿ ಹೀಗೊಂದು ವ್ಯವಸ್ಥೆ ಮಾಡಿಕೊಳ್ಳಬೇಕಿತ್ತೆಂಬ ಯೋಚನೆ ಇದೀಗ ಬಂದಿರುವುದು ಕಾಲಾತೀತ ವೆನ್ನಬಹುದು. ಸೃಷ್ಟಿಕರ್ತನ ದಿಗ್ದರ್ಶನವು ಹೀಗೆ ಇರುತ್ತದೆಯೆಂದು ಯಾವ ಮಾಂತ್ರಿಕ, ಯಾಂತ್ರಿಕರ ಭವಿಷ್ಯ ಪುಸ್ತಕದಲ್ಲೂ ಇಲ್ಲವೆನ್ನುವುದು ಪ್ರಸ್ತುತ ಸ್ಥಿತಿಯನ್ನರಿತು ಜಿಜ್ಞಾಸುಗಳೂ ಮನವರಿಕೆ ಮಾಡಿಕೊಳ್ಳಬಹುದು.

ದುಸ್ಥಿತಿಯ ಒಳಿತುಗಳು?

1. ಆರ್ಥಿಕ ಮದವನ್ನು ಹುಟ್ಟಡಗಿಸಿತು, 2.ಸ್ವಾರ್ಥವಿಟ್ಟುಕೊಂಡ ವಿಶ್ವಾಸಿಗರು ಅವಿಶ್ವಾಸಿಗಳಾದರು.
3.ಅತಿನಂಬಿಕಸ್ತರು ವಾಸ್ತವವನ್ನರಿತು ದೂರವಾದರು.
4.ಸಂಬಂಧಗಳ ನಡುವಿನ ಬಂಧ ವನ್ನು ಕೊಂಚ ಪರೀಕ್ಷಿಸಿತು.
5.ಸಂಘ ಸಂಸ್ಥೆಗಳು ಸ್ಥಳೀಯವಾಗಿ ಮಾನವೀಯತೆ ಮೆರೆದವು.
6.ಪ್ರಾಕೃತಿಕ ವಸ್ತುಗಳ ಅವಲಂಬನೆಗಳನ್ನು ಹೆಚ್ಚು ಮಾಡಿಸಿತು.
7.ಆರೋಗ್ಯ, ಶುಚಿತ್ವದ ಬಗೆಗೆ ಮಾಹಿತಿಯನ್ನೊದಗಿಸಿ ಸ್ವ ಸ್ವಾಸ್ಥ್ಯ ಕಾಪಾಡುವುದನ್ನು ಕಲಿಸಿತು.
8.ಸಾಂಸಾರಿಕ ಜೀವನದಲ್ಲಿ ಸರಸ, ಹಂಚಿಕೆಗಳನ್ನು ಹೆಚ್ಚಿಸಿತು.
9.ಉಳಿತಾಯ ಕೂಡಿಡಬೇಕಿತ್ತು ಎಂಬ ಸೂಚನೆ ಬಲವಾಗಿ ಮೂಡಿಸಿತು.
10.ವಿನಃ ತಿರುಗಾಟ, ಸ್ವ ನೈರ್ಮಲ್ಯ, ಬಡಬಗ್ಗರಿಗೆ ನೆರವು, ಪರಿಸರ ಸುಸ್ಥಿರತೆಗಳನ್ನು ಜಾಗೃತಿ ಇಲ್ಲದೆ ಸರಿದೂಗಿಸಿತು.
11.ಸರಕಾರದ ಎಲ್ಲಾ ವಿಭಾಗಗಳು ಒಮ್ಮೆಗೆ ತಲ್ಲಣಿಸಿದವು.
12.ಸಾಮಾಜಿಕ ಕಳಕಳಿ ಪ್ರತಿಶತಃ ಎಲ್ಲರ ಮನ ತಟ್ಟಿತ್ತಾದರೂ ಕೆಲವರು ಅಲ್ಲಗಳೆದರು ಹಲವರು ಅಳವಡಿಸಿಕೊಂಡರು.

ಇದೇನು ಮನುಷ್ಯ ಮಾಡುತ್ತಿರುವ ಆವಾಂತರಗಳಿಗೆ ಕಾಣದ ದಿವ್ಯಶಕ್ತಿ ನೀಡಿರುವ ಬಹುಮಾನವೇ? ಇಲ್ಲವಾದರೆ ಕಾಣದ ಜೀವಿಯ ಅರ್ಥವಿಲ್ಲದ ಕಾರುಬಾರು ಏನೆಂದರೂ ಹಲವಾರು ಜೀವಗಳ ಬಲಿ ತೆಗೆದುಕೊಂಡಿರುವುದಂತೂ ಸತ್ಯ.

ದುಸ್ಥಿತಿಯ ಕೆಡುಕುಗಳು:

1.ಆರ್ಥಿಕ ಮುಗ್ಗಟ್ಟು ಗಳು ಎಲ್ಲೆ ಮೀರಿತು.

2.ಬಡವ ತೀರಾ ಕ್ಲಿಷ್ಟ  ಸ್ಥಿತಿ ತಲುಪಿದ. ಮುಂದೇನು?  ಎಂಬ ಪ್ರಶ್ನೆಗೆ ಉತ್ತರವನ್ನೇ ಕಂಡುಕೊಳ್ಳದಾಗಿದ್ದಾನೆ.

3.ಈ ಸ್ಥಿತಿಯ ಪ್ರಯೋಜನ ಪಡೆದ ರಾಜಕೀಯ ಪಕ್ಷಗಳು ದಾನ ಧರ್ಮಗಳಂತಹ ಶ್ರೇಷ್ಠ ಕಾರ್ಯಗಳನ್ನು ಮಾಡಿ ಪ್ರಚಾರ ಗಿಟ್ಟಿಸಿ ಕೊಂಡರು.

4. ಸರಕಾರಿ ಧನದಾಹಿಗಳು ಈಗಲೋ ಆಗಲೋ ಬರುವ ಅನುದಾನಗಳಲ್ಲಿ ಆಂಶಿಕ ಮೊತ್ತಗಳನ್ನೋ, ವಸ್ತುಗಳನ್ನೋ ಪಡೆಯುವಲ್ಲಿ ಯಶಸ್ವಿಯಾದರು.

5.ಮಾರುಕಟ್ಟೆಯ ಪೂರೈಕೆದಾರರು ಸರಕಾರಿ ನಿಬಂಧನೆಗಳಿದ್ದರೂ ಬೆಲೆ ತಾರತಮ್ಯತೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಂಡರು.

6. ಶಿಕ್ಷಣ ಕ್ಷೇತ್ರವಂತೂ ತಮ್ಮ ಯೋಜನಪಟ್ಟಿಯನ್ನು ಬದಲಾಯಿಸುವ ನಡೆಗೆ ಹೋಗಲೇಬೇಕಾಯ್ತು.

7.ಬಡವಿದ್ಯಾರ್ಥಿಗಳು ಮುಂದೆ ಯಾವಾಗ? ಏನು? ಎಂದು ಆಧುನಿಕ online ನ ನ್ನು ಕಾರಣಾಂತರ ದಿಂದ ಪಡೆಯಲಾಗದೆ, ಉತ್ತರ ಸಿಗದ ಪ್ರಶ್ನೆಗಳ ಜೊತೆ ಆಗಸ ನೋಡುವ ಸ್ಥಿತಿ ಕರುಣಾಜನಕ.

8.ಚಿಣ್ಣರು ಸುದೀರ್ಘ ರಜೆಯ ಸವಿ ಉಂಡು ತೇಗಿ ಅಜೀರ್ಣತೆಗೆ ತೆರಳಿ ವಿಧಿಯಿಲ್ಲದೆ ಕೈಗೆ ಸಿಗುತ್ತಿಲ್ಲ ದ ಸ್ಮಾರ್ಟ್ ಸೊತ್ತಿಗೆ ದಾಸರಾಗಿದ್ದಾರೆ.

 9.ಖಾಸಗಿ ಸಂಸ್ಥೆಗಳ ನೌಕರರಂತೂ ಬಡವ ಬಲ್ಲಿದರೆನ್ನದೆ ಸಮಾನವಾಗಿ ಕೈಯಲ್ಲು, ಬ್ಯಾಂಕ್ನಲ್ಲೂ ಜಮಾವಣೆಯಲ್ಲಿದ್ದ ಅಲ್ಪ ಸ್ವಲ್ಪವನ್ನು ದಿನಾ  ದಿನ ಕರಗಿಸುತ್ತ, ಸರಕಾರದ  ಸಾಲ ಮರುಪಾವತಿ ಅವಧಿ ವಿಸ್ತರಣೆ ಭಾಗ್ಯ ಪಡೆದು ತುಂಬಲಾರದ ನಷ್ಟದ ಮೂಟೆಯನ್ನು ಭವಿಷ್ಯಕ್ಕೆ ಕಟ್ಟಿಕೊಳ್ಳುತ್ತಿದ್ದಾರೆ.

10.ಏನು ಅರಿಯದ ಮುಗ್ದ ಅನಕ್ಷರಸ್ತ ರೂ ಕೂಡ ಲೊಕ್ಡೌನ್, ಸೀಲ್ಡೌನ್, ಕರ್ಫ್ಯೂ ಎಂಬೆಲ್ಲ ಭಾಷೆಗಳನ್ನು ಮಾತಾಡುತ್ತಾ ಸ್ವ ಅನುಭವ ಗಳನ್ನು ಹೆಚ್ಚು ಮಾಡುತ್ತಿದ್ದಾರೆ.

11.ನಿಜವಾದ ಅರ್ಹತೆ ಪಡೆಯದೆ ಹಣ ನೀಡಿ ಸರ್ಟಿಫಿಕೇಟ್ ಪಡೆದು ಸರಕಾರ, ಖಾಸಗಿ ಇಲಾಖೆಯನ್ನು ಏರಿ ಹೂಡಿಕೆ ಮಾಡಿದ ಆರ್ಥಿಕತೆಯನ್ನು ಭರಿಸಲು ಈ ವ್ಯವಸ್ಥೆ ಯ ನಡುವೆಯೂ ಹೋರಾಡುತ್ತಾರೆಂದರೆ ಆಶ್ಚರ್ಯವೇ.

12.ಭೂಮಿ ಸಾಕಾಗದೆ ಬೆಳವಣಿಗೆಯ ಹಾದಿ ಹಿಡಿದು ಎಲ್ಲೊ ಹೊಸ ಜಾಗ ಕಂಡುಹಿಡಿದ ಕ್ರಿಯಾಶೀಲತೆ ಇರುವ ಜಗತ್ತಿನ ಯಾರಿಗೂ ಇದಕ್ಕೊಂದು ಪರಿಹಾರ ಒದಗಿಸಲು ಅಸಾದ್ಯವಾಗಿರುವುದು ಖೇದಕರ.

13.ರಾಜಕೀಯ ಲಾಬಿ ಹಾಗೂ ಹಣದಾಹಿ ನಿಲುವುಗಳು ಸಾಮಾನ್ಯ ಸಂಶೋಧಕರು, ವೈದ್ಯರು ಗಳು ಕಂಡುಕೊಂಡ ಪರಿಹಾರಕ್ಕೆ ಮಣೆ ಹಾಕದೆ ನೇರವಾಗಿ ತಿರಸ್ಕಾರ ಭಾವ ತೋರಿರುವುದನ್ನು ತಿಳಿದ ಜನರು ಅಲ್ಲೂ ಇಲ್ಲೂ ಇಲಾಖೆಗಳಿಗೆ ಛಿಮಾರಿ ಹಾಕಿಕೊಳ್ಳುವುದು ಕಾಣುತಿದೆ.

14.ಸಾರಿಗೆ ವ್ಯವಸ್ಥೆ ಗಳು ಪ್ರಾಕೃತಿಕ ಬದಲಾವಣೆಯಿಂದ ಸಂಪಾದನೆಯೂ ಇಲ್ಲದೆ  ವಾಹನ ಸೊತ್ತುಗಳ ಕ್ರಯ ಇಳಿಕೆ, ವಿನಃ ತೆರಿಗೆ ಗಳಂತಹ ಅಪಾಯಗಳನ್ನು ಹೊತ್ತು ನೆಟ್ ಬೋಲ್ಟ್ ಗಳನ್ನು ತುಕ್ಕು ಹಿಡಿಸಿಕೊಳ್ಳುತಿದ್ದಾರೆ.

15. ಮೂಲಸೌಕರ್ಯ ಗಳನ್ನು ನೀಡುತ್ತಿರುವ ವಿಭಾಗಗಳಂತೂ ಕಟ್ಟಿಸಿಕೊಳ್ಳಬೇಕಾದ ಮೊತ್ತಕ್ಕೆ ಮೊತ್ತ ಸೇರಿಸಿ ಕಡತ ಗಳಲ್ಲಿ ಇರಿಸಿಕೊಳ್ಳುತ್ತ ಹೊರತರಲು ಸಮಯ ಕಾಯುತ್ತಿದ್ದಾರೆ.

 ಈ ಸಮಸ್ಯೆಗಳಿಗೆ  ಹೀಗಾದರೂ ಪರಿಹಾರ ಮಾಡಬಾರದೆ ಎಂಬ ಊಹಾಪೋಹ ನಿಲುವುಗಳು ನಮ್ಮಲ್ಲಿ ಕಾಡುತಿವೆ.

1.ಈ ಬಿಕ್ಕಟ್ಟಿನ ಆರ್ಥಿಕತೆಯಲ್ಲಿ ತಾರತಮ್ಯ ಮಾಡದೆ ಎಲ್ಲಾ ವರ್ಗದ ಜನರಿಗೂ ಸರಕಾರದ ಪಡಿತರವನ್ನು ಇನ್ನಷ್ಟು ಬಲಪಡಿಸಿ ನೀಡಬಾರದೇಕೆ? ವೃಥಾ ಕೆಲವರು ಮಾತ್ರ ಫಲಾನುಭವಿಗಳಾಗುವುದೇಕೆ?

2.ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳಾದ ಪುಸ್ತಕ, ಸಮವಸ್ತ್ರ, ಉಪಕರಣ ಗಳಲ್ಲಿ ಖಾಸಗಿ -ಸರಕಾರಿ ಎಂಬ ದ್ವಂದ್ವನೀತಿ ಯಾಕೆ? ಈ ಆರ್ಥಿಕತೆಯಲ್ಲಾದರೂ ಖಾಸಗಿಯವರಿಗೆ ಉಚಿತ ವಾಗಿ ನೀಡಬಹುದಲ್ಲವೇ?

3.ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಸ್ವ ಉದ್ಯೋಗಗಳಂತಹ ಪ್ರಾಶಸ್ತ್ಯ ಉನ್ನತೀಕರಿಸಿ ಎಲ್ಲರಿಗೂ ಸ್ವಾವಲಂಬಿತ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ಯಾಕೆ ಮಾಡಬಾರದು?

4.ಹೊಸ ಶಿಕ್ಷಣ ನೀತಿಯಂತೆ ಇನ್ನಷ್ಟು ಕ್ಷೇತ್ರಗಳಲ್ಲಿ  ಹೊಸ ನೀತಿ ತಂದು ಉತ್ಪಾದಿತವಾಗಿ ಜಾರಿ ಮಾಡುವುದು ಪರಿಣಾಮಕಾರಿಯಲ್ಲವೇ? ನಲಿಕಲಿ ಯಂತೆ ಹೊಸವ್ಯವಸ್ಥೆ ಗಳು ವಿಫಲವಾಗುವುದೇ ಹೆಚ್ಚು.

5.ಸರಕಾರಿ ಇಲಾಖೆಗಳಲ್ಲಿ ಹೆಚ್ಚಿನವುಗಳು  ಈ ದುಸ್ಥರ ಸ್ಥಿತಿಯನ್ನು ಉಪಯೋಗಿಸಿಕೊಂಡು ವಿನಃ ಕಾರಣ ನಾಳೆ-ನಾಳೆಗಳಲ್ಲಿ ಮುಳುಗಿ ಚಿಲ್ಲರೆ ದುಡ್ಡು ಗಳಿಸೋ ಆಕಾಂಕ್ಷೆಯಿಂದ ಜನರ ಉತ್ಪಾದಕ ಸಮಯ ವ್ಯರ್ಥ ಹರಣ ಮಾಡುವುದಕ್ಕೆ ಯಾಕೆ ನೇತಾರರು ಮಾತಾಡುತ್ತಿಲ್ಲ?

6.ನಮ್ಮ ಅನುಭವಿ ವೈದ್ಯರುಗಳು ಕಂಡುಕೊಂಡಿರುವ ಲಸಿಕೆಗಳೋ, ಕಷಾಯಗಳೋ ಪರಿಣಾಮಕಾರಿಯಾಗುವುದಾದರೆ ಬಳಕೆಗೆ ಯಾಕಿಷ್ಟು ತಡೆ? ಜನಸಂಖ್ಯೆ ನಿಯಂತ್ರಣಕ್ಕೆ ಕಾಯುತ್ತಿದ್ದಾರ ಇಲಾಖೆಯವರು? ಅಥವಾ ಬೇಕೆಂದಾಗ ನಿಮಗೆ ಹಣ ನೀಡುವ ಶ್ರೇಷ್ಠ ಔಷಧಾಲಯಗಳ ಕಂಪೆನಿಯಿಂದಲೇ ಬರಬೇಕೆಂದು ಕಾಯುತಿರುವಿರೇ?

ಇಂತಹ ಹಲವು ಬೆತ್ತಲೆ ಪ್ರಶ್ನೆಗಳು ಎಲ್ಲರ ಮನಸಿನಲ್ಲಿ ಮೂಡುತಿದ್ದರೂ ನಮಗ್ಯಾಕೆ ಈ ಉಸಾಬರಿ ಎಂದು ಕೈ ಕಟ್ಟಿ ಕುಳಿತಿದ್ದಾರೆ ಪೌರರು. ಹೀಗೆ ಮುಂದುವರೆದರೆ ಜನರೇ ಉತ್ತರ ಕೊಡಬೇಕಷ್ಟೆ. ಆದರೆ ಅದು ಯಾವಾಗ???

ಜನಪ್ರತಿನಿಧಿಗಳು, ಮಂತ್ರಿವರೇಣ್ಯರು, ಸಂಬಂದಿತ ಇಲಾಖೆಗಳು ಎಚ್ಚತ್ತರೆ ಪರಿಹಾರ ಖಂಡಿತಾ ಒದಗಿಸುವ ಸಾಧ್ಯತೆಗಳಿವೆ.

ರಾಧಾಕೃಷ್ಣ ಎರುಂಬು. ರಾಮ್-ದೇವ್ ವಿಟ್ಲ.

- Advertisement -

Related news

error: Content is protected !!