Wednesday, July 22, 2026
spot_imgspot_img
spot_imgspot_img

ದ.ಕ. ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಕರ್ತವ್ಯದಿಂದ ವಜಾ…!

- Advertisement -
- Advertisement -

ನ್ಯಾಯಕ್ಕಾಗಿ ಶಾಸಕ ಅಶೋಕ್ ರೈ ಬಳಿ ಬಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರು

ನಿಮ್ಮೊಂದಿಗೆ ನಾನಿದ್ದೇನೆ- ಅಶೋಕ್ ರೈ ಭರವಸೆ

ಪುತ್ತೂರು: ಆಶಾಕಾರ್ಯಕತೆಯರ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತರ್ಕಬದ್ದಗೊಳಿಸಿ ಹೆಚ್ಚುವರಿ ಆಶಾಕಾರ್ಯಕರ್ತೆಯರನ್ನು ಕರ್ತವ್ಯದಿಂದ ವಜಾಗೊಳಿಸುವ ಸರ್ಕಾರದ ಆದೇಶದ ಬಗ್ಗೆ ಪುತ್ತೂರು ವಿಧಾನ ಸಭಾ ಶಾಸಕ ಅಶೋಕ್ ಕುಮಾರ್‍ ರೈ ಇವರಿಗೆ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳ ಆಶಾಕಾರ್ಯಕರ್ತೆಯರು ಮನವಿ ಮಾಡಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಾಗಿ 2009ನೇ ಸಾಲಿನಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು 2025ನೇ ಜೂನ್ ತಿಂಗಳ ಸುತ್ತೋಲೆಯ ಅನ್ವಯ ಆಶಾ ಕಾರ್ಯಕರ್ತೆಯರ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತರ್ಕ ಬದ್ದಗೊಳಿಸುವುದರಿಂದ ಜಿಲ್ಲೆಯಲ್ಲಿ 1000 ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿದ ಆಶಾಕಾರ್ಯಕರ್ತೆಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಆದೇಶವಾದ ಹಿನ್ನಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸುಮಾರು 153ಆಶಾಕಾರ್ಯಕರ್ತೆಯರು ಕರ್ತವ್ಯ ಕಳೆದುಕೊಳ್ಳುವ ಸಾಧ್ಯತೆಯಿದೆ ಆದ್ದರಿಂದ ಈ ಆದೇಶವನ್ನು ಹಿಂಪಡೆದು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಉಂಟು ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಜಿಲ್ಲೆಯ ಎಲ್ಲಾ ಆಶಾಕಾರ್ಯಕರ್ತೆಯರು ನ್ಯಾಯಕ್ಕಾಗಿ ಶಾಸಕ ಅಶೋಕ್ ರೈ ಬಳಿ ಹೋಗಿ ಮನವಿ ಮಾಡಿದ್ದಾರೆ.

5ತಿಂಗಳ ಹಿಂದೆ ತಾಲೂಕಿನಲ್ಲಿ ಸುಮಾರು 41 ಆಶಾಕಾರ್ಯಕರ್ತೆಯರನ್ನು ಕೆಲಸದಿಂದ ರಿಲಿವ್ ಮಾಡಿದ್ದರು ಮತ್ತು 4 ತಿಂಗಳ ವೇತನ ಹಾಕಿರಲಿಲ್ಲ, ಆಗ ಪುತ್ತೂರಿನ ಆಶಾಕಾರ್ಯಕರ್ತೆಯರು ಶಾಸಕ ಅಶೋಕ್ ರೈ ಬಳಿ ಹೋದಾಗ ಅವರು 41 ಆಶಾಕಾರ್ಯಕರ್ತೆಯರನ್ನು ಪುನಃ ಕೆಲಸಕ್ಕೆ ಸೇರಿಸುವ ಕೆಲಸ ಮಾಡಿದ್ದರು, ಮತ್ತೆ ಬಾಕಿ ಇದ್ದ 4 ತಿಂಗಳ ವೇತನವನ್ನು ಅದು ಕೂಡಾ ಸರಿ ಮಾಡಿಕೊಟ್ಟಿದ್ದಾರೆ, ಆ ಹಿತ ದೃಷ್ಟಿಯಿಂದ ದ.ಕ ಜಿಲ್ಲೆಯ ಎಲ್ಲಾ ತಾಲೂಕಿನ ಆಶಾಕಾರ್ಯಕರ್ತೆಯರನ್ನು ಸೇರಿಸಿಕೊಂಡು, ಸರ್ಕಾರದ ಪ್ರತಿನಿಧಿಯಾಗಿ ಅಶೋಕ್ ರೈ ಅವರನ್ನು ಭೇಟಿಯಾಗಿ , ಈ ಸರಿ ಕೂಡಾ 153 ಜನರನ್ನು ಜಿಲ್ಲೆಯಿಂದ ಆಶಾಕಾರ್ಯಕರ್ತೆಯರನ್ನು ತೆಗೆದು ಹಾಕುತ್ತಾರೆ ಎಂಬ ಸಂದೇಶ ಬರುತ್ತಿರುವುದರಿಂದ , ನಮ್ಮ ವೃತ್ತಿಯನ್ನು ನಮಗೆ ಕೊಡಿ ಎನ್ನುವ ಉದ್ದೇಶದಿಂದ ಇಲ್ಲಿ ಎಲ್ಲಾ ಸೇರಿದ್ದೆವೇ ಎಂದು ಆಶಾಕಾರ್ಯಕರ್ತೆ ಅಮೀತಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಆಶಾಕಾರ್ಯಕರ್ತೆಯರ ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಅದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡುತ್ತೆನೆ , ನೀವು ನನ್ನ ಮೇಲೆ ಇಟ್ಟುಕೊಂಡ ಭರವಸೆ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೆನೆ , ಕರ್ನಾಟಕ ಸರ್ಕಾರದಿಂದ ಇದನ್ನು ಯಾವ ರೀತಿ ಸರಿಪಡಿಸಬಹುದು , ಇದರಿಂದಾಗುವ ಪರಿಣಾಮಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರುವಂತಹ ಕೆಲಸವನ್ನು ಮಾಡುತ್ತೆನೆ , ಯಾರಿಗೆಲ್ಲ ಸಮಸ್ಯೆಯಾಗಿದೆ ಅವರು ಮುಖ್ಯಮಂತ್ರಿಯ ಜತೆಗೆ ಆರೋಗ್ಯ ಮಂತ್ರಿಯನ್ನು ಭೇಟಿ ಮಾಡುವ ಕೆಲಸ ಮಾಡಿ , ನಾನು ನಿಮ್ಮ ಜತೆ ಇರುತ್ತೆನೆ ಎಂದು ಅಶೋಕ್ ರೈ ಭರವಸೆ ನೀಡಿದರು.

- Advertisement -

Related news

error: Content is protected !!