




ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ -ಅಳಕೆಮಜಲು 42ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವವು ಅ.3ನೇ ಗುರುವಾರದಿಂದ 11ನೇ ಶುಕ್ರವಾರದವರೆಗೆ ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕನಗರದಲ್ಲಿ ನಡೆಯಲಿದೆ.

ಅ. 3ರಿಂದ 8ರವರೆಗೆ ಪ್ರತಿ ದಿನ ರಾತ್ರಿ 7:30 ರಿಂದ 8:30ರವರೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ.
ದಿನಾಂಕ: 6-10-2024 ನೇ ಆದಿತ್ಯವಾರ ಬೆಳಿಗ್ಗೆ 11:00 ರಿಂದ ಪುರುಷರ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ರಾತ್ರಿ 8:45ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕೆಇಗೆ ಭಗ್ತಿಗೀತೆ, ಭಾವಗೀತೆ, ಜನಪದ ಗೀತೆ ಸ್ಪರ್ಧೆ ನಡೆಯಲಿದೆ.
ದಿನಾಂಕ: 9-10-2024 ನೇ ಬುಧವಾರ ಬೆಳಿಗ್ಗೆ 8:00ಕ್ಕೆ ಗಣಪತಿ ಹವನ ನಡೆದು ಬಳಿಕ 9:30ಕ್ಕೆ ಧ್ವಜಾರೋಹಣ ನಡೆದು 9:45 ಮೂರ್ತಿ ಪ್ರತಿಷ್ಠೆ ಆದ ಬಳಿಕ 11:00ಕ್ಕೆ ಪೂಜಾ ಸೇವೆ ಪ್ರಾರಂಭ, ಮನೆ ತುಂಬಿಸಲು ತೆನೆ ವಿತರಣೆ, ಮಕ್ಕಳಿಗೆ ಅಕ್ಷರಭ್ಯಾಸ ನಡೆಯಲಿದೆ. ಪೂ. 11:30 & ಸಂಜೆ 6:30 ರಿಂದ 7:30 ಭಜನೆ ನಡೆಯಲಿದೆ. ಮಧ್ಯಾಹ್ನ1:00 ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:00ಕ್ಕೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ 9:30 ಯಕ್ಷಸಾರಥಿ ಯಕ್ಷಕಲಾ ಬಳಗ ಪುತ್ತೂರು ಇವರಿಂದ “ಶ್ರೀ ದೇವಿ ಲೀಲೆ” ಯಕ್ಷಗಾನ ಪ್ರಸಂಗ ನಡೆಯಲಿದೆ.
10-10-2024 ನೇ ಗುರುವಾರ ಬೆಳಿಗ್ಗೆ8:30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9:30 ರಿಂದ ಪೂಜಾ ಸೇವೆ ಆರಂಭ ಮತ್ತು ಫ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ನಡೆದು ಬಳಿಕ 10:30-12:30 & ರಾತ್ರಿ 6:30 7:30 ಭಜನೆ ನಡೆಯಲಿದೆ. ಮಧ್ಯಾಹ್ನ1:00 ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ 10:00 ರಿಂದ ಶ್ರೀ ದುರ್ಗಾ ಕಲಾ ತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ, ಕೇಪು ಅಭಿನಯದ “ಕಾಂಚನ” ನೈಜ ಘಟನೆ ಆಧಾರಿತ ಕುತೂಹಲ ಭರಿತ ಸಾಮಾಜಿಕ ನಾಟಕ ನಡೆಯಲಿದೆ.
11-10-2024 ನೇ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಪೂಜೆ ಸೇವೆ ಆರಂಭವಾಗಿ ಬಳಿಕ 10:30-12:00 ಭಜನೆ ನಡೆದು ಬಳಿಕ ಮಧ್ಯಾಹ್ನ 12:30 ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಬಳಿಕ 1:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ 4:30ಕ್ಕೆ ಮಹಾಮಂಗಳಾರತಿ- ದಿಗ್ವಿಜಯೋತ್ಸವ ವಂದೇ ಮಾತರಂ, ಮೂರ್ತಿ ಜಲಸ್ತಂಭನ ನಡೆಯಲಿದೆ. ವಿಶೇಷ ಆಕರ್ಷಣೆಯವಾಗಿ ವಿದ್ಯುತ್ ಅಲಂಕೃತ ಪ್ರಭಾವಳಿ, ಕುಣಿತ ಭಜನೆ ನಡೆಯಲಿದೆ.








