ಗಾಯಗೊಂಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಕಾಡಾನೆ ಭೀಮ ಅರಣ್ಯ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸಾವನ್ನಪ್ಪಿದ್ದಾರೆ.
ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಲು ಮೊದಲು ಅರವಳಿಕೆ ಮದ್ದು ನೀಡಲು ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆಯೇ ಆನೆ ದಾಳಿ ಮಾಡಿದೆ. ಗಾಯಗೊಂಡಿದ್ದ ಭೀಮ ಆನೆಯಿಂದಲೇ ಅಟ್ಯಾಕ್ ಮಾಡಲಾಗಿದೆ. ವನ್ಯ ಜೀವಿ ವೈದ್ಯ ವಸೀಂ ಜೊತೆ ಅರಣ್ಯ ಸಿಬ್ಬಂದಿ ವೆಂಕಟೇಶ್ ಕೂಡ ತೆರಳಿದ್ದು, ಈ ವೇಳೆ ಭೀಮ ನೇರವಾಗಿ ವೆಂಕಟೇಶ್ ಮೇಲೆ ದಾಳಿ ಮಾಡಿದೆ.
ದಾಳಿಯಿಂದಾಗಿ ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಹಾಸನದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ವೆಂಕಟೇಶ್ ಸಾವನ್ನಪ್ಪಿದ್ದಾರೆ.
ಅರಣ್ಯ ಸಿಬ್ಬಂದಿ ವೆಂಕಟೇಶ್ ಈ ಹಿಂದೆ ಹತ್ತಾರು ಆನೆಗಳನ್ನು ಸೆರೆಹಿಡಿಯುವ ವೇಳೆ ಅರವಳಿಕೆ ಮದ್ದು ನೀಡಿದ್ದರು. ಇನ್ನು ಭೀಮ ಕೂಡ ಶಾಂತ ಸ್ವಭಾವದವನಾಗಿದ್ದು, ಇದುವರೆಗೆ ಯಾರ ಮೇಲೂ ಅಟ್ಯಾಕ್ ಮಾಡಿರಲಿಲ್ಲ. ನೋವಿನಿಂದ ಬಳಲುತ್ತಿದ್ದ ಭೀಮ ಇಂದು ಭಯದಲ್ಲಿ ತನ್ನನನ್ನು ಹಿಡಿಯಲು ಬಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ.