Tuesday, July 21, 2026
spot_imgspot_img
spot_imgspot_img

ಮಂಗಳೂರಿನಲ್ಲಿ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್: ಎಸ್ ಎಲ್ ವಿ ಬುಕ್ ಹೌಸ್‌ಗೆ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ಪ್ರಶಸ್ತಿ

- Advertisement -
- Advertisement -

ಮಂಗಳೂರು, ಫೆ. 26: ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ನಡೆಯಿತು.

ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಸ್ತಕ ಮಾರಾಟ ಮಳಿಗೆಯಲ್ಲಿ ರಾಜ್ಯದ್ಯಂತ ಹೆಸರುವಾಸಿಯಾದ SLV ಬುಕ್ ಹೌಸ್‌ಗೆ ಟೈಮ್ಸ್ ಬಿಸಿನೆಸ್ ಎವಾರ್ಡ್ ನೀಡಿ ಗೌರವಿಸಲಾಯಿತು.ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಲಾಯಿತು.

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು. ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಗೆ *“ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್”* ವಿಭಾಗದಲ್ಲಿ ಪ್ರಶಸ್ತಿ ಲಭಿಸಿತು. ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆಯವರು ಮತ್ತು ಎಸ್ ಎಲ್ ವಿ ಬುಕ್ ಹೌಸ್ ನ ಪ್ರಧಾನ ವ್ಯವಸ್ಥಾಪಕರಾದ ರಾಜಾ ಅಂಚನ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಚಂದ್ರಕಾಂತ್ ಬೆಂಗಳೂರು, ರಾಮ್ ದಾಸ್ ಶೆಟ್ಟಿ ವಿಟ್ಲ, ಯೋಗೀಶ್ ನೇರ್ಲಾಜೆ, ಅಮಿತ್ ಮೈಸೂರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ದಿವಾಕರ್ ದಾಸ್ ರವರು ಈ ಪ್ರಶಸ್ತಿಯನ್ನು ನಾವು ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯಿಂದ ಈ ಪ್ರಶಸ್ತಿ ಲಭಿಸಿದೆ. ಹಾಗಾಗಿ ಈ ಪ್ರಶಸ್ತಿಯನ್ನು ನಮ್ಮ ಗ್ರಾಹಕರಿಗೆ ಮತ್ತು ಗ್ರಾಹಕಾರೊಂದಿಗೆ ವಿಶೇಷ ಸೇವೆಯನ್ನು ನೀಡಿದ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದರು.

ರಾಜ್ಯಾದ್ಯಂತ ಪುಸ್ತಕ ಮಾರಾಟ ಮಳಿಗೆಯಲ್ಲಿ ಹೆಸರುವಾಸಿಯಾದ SLV ಬುಕ್ ಹೌಸ್‌ ಬೆಂಗಳೂರು, ಮೈಸೂರು, ಚಾಮರಾಜನಗರ, ಪುತ್ತೂರು, ಮೂಡಬಿದ್ರೆ, ಮಂಗಳೂರಿನ ಬಿಜೈ, ಮೇರಿಹಿಲ್, ಮಾರ್ನೆಮಿ ಕಟ್ಟೆ, ಕೊಡಿಯಾಲ್ ಬೈಲ್ ನಲ್ಲಿ ಕಾರ್ಯಾಚರಿಸುತ್ತಿರುತ್ತಿದ್ದು , ಇದೀಗ ಕೊಡಗಿನ ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಹೊಸ ಶಾಖೆ ಶುಭಾರಂಭಗೊಳ್ಳಲಿದೆ.

- Advertisement -

Related news

error: Content is protected !!