Sunday, July 19, 2026
spot_imgspot_img
spot_imgspot_img

ಅಯೋಧ್ಯೆ: ಶ್ರೀ ರಾಮ ಮಂದಿರಕ್ಕೆ 286 ಕೆಜಿ ತೂಕದ ಬಂಗಾರದ ಧನಸ್ಸು ಸಮರ್ಪಣೆ

- Advertisement -
- Advertisement -

ಅಯೋಧ್ಯೆ: ಒಡಿಶಾದಿಂದ ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಜ.23 ರಂದು 286 ಕೆಜಿ ತೂಕದ ಬಂಗಾರದ ಧನಸ್ಸನ್ನು ಸಮರ್ಪಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ಅಪರೂಪದ ಧನಸ್ಸು ಭಕ್ತರಲ್ಲಿ ಅಪಾರ ಭಕ್ತಿ ಮೂಡಿಸಿದೆ.

ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳು ನೈಪುಣ್ಯದಿಂದ ಈ ಧನುಸ್ಸನ್ನು ರೂಪಿಸಿದ್ದಾರೆ. ಚಿನ್ನ, ಬೆಳ್ಳಿ, ತಾಮ್ರ, ಸತು ಹಾಗೂ ಕಬ್ಬಿಣದ ಮಿಶ್ರಲೋಹದಿಂದ ಈ ಧನಸ್ಸು ತಯಾರಿಸಲ್ಪಟ್ಟಿದ್ದು, ಅದರ ನಿರ್ಮಾಣ ಕಾರ್ಯ ಒಡಿಶಾದಲ್ಲಿ ಪೂರ್ಣಗೊಂಡಿದೆ.

ರಾಮ ಮಂದಿರದ ಉದ್ಘಾಟನೆಯ ಬಳಿಕ ದೇಶದ ನಾನಾ ಭಾಗಗಳಿಂದ ಭಕ್ತರು ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಮ ಮಂದಿರ ಭಕ್ತಿಯ ಕೇಂದ್ರವಾಗುತ್ತಿದೆ.

- Advertisement -

Related news

error: Content is protected !!