Friday, April 26, 2024
spot_imgspot_img
spot_imgspot_img

ಕಲ್ಲಡ್ಕ: ಆವಾಸೀಯ ಪ್ರೇರಣಾ ಶಿಬಿರದ ಉದ್ಘಾಟನಾ ಶಿಬಿರ

- Advertisement -G L Acharya panikkar
- Advertisement -
vtv vitla

ಕಲ್ಲಡ್ಕ: ” ಸದೃಢ ಭಾರತ ನಿರ್ಮಾಣಕ್ಕಾಗಿ ವ್ಯಕ್ತಿ ನಿರ್ಮಾಣ ” ಎಂಬ ಧ್ಯೇಯದಡಿಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ, ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ ಇದರ ಆಶ್ರಯದಲ್ಲಿ ಮೂರು ದಿನಗಳ ಆವಾಸೀಯ ಪ್ರೇರಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಸಮಾರಂಭವು ಡಿ. 24 ರಂದು ಶ್ರೀರಾಮವಿದ್ಯಾಕೇಂದ್ರದ ವೇದವ್ಯಾಸ ಧಾನ್ಯ ಮಂದಿರದಲ್ಲಿ ನಡೆಯಿತು.

ಬಂಟ್ವಾಳ ತಾಲೂಕಿನ ತಹಶೀಲ್ದಾರಾದ ಡಾ| ಸ್ಮಿತಾ ರಾಮು ಇವರು ದೀಪ ಪ್ರಜ್ವಲಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈಯವ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ , “ನಮಗೆ ಶಿಕ್ಷಣ ನೀಡಿದ ಗುರುಗಳನ್ನು ನಾವು ಪ್ರತಿಕ್ಷಣವೂ ನೆನಪಿಸಬೇಕು. ಶಿಕ್ಷಕರ ಆದರ್ಶ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಶ್ರೀರಾಮ ವಿದ್ಯಾ ಸಂಸ್ಥೆ ನೀಡುತ್ತಿದೆ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಭವಿಷ್ಯದಲ್ಲಿ ಒಳ್ಳೆಯ ಶಿಕ್ಷಕರಾಗಲು ಭವಿಷ್ ಶಿಬಿರ ಒಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು. ಯಾರ ನಿಂದನೆಗೂ ನಾವು ಒಳಗಾಗದೇ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ವಸಂತ ಮಾಧವ ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೃಷ್ಣ ಪ್ರಸಾದ್ ಶ್ರೀಮಾನ್ ಸ್ವಾಗತಿಸಿದರು.

- Advertisement -

Related news

error: Content is protected !!