Friday, June 5, 2026
spot_imgspot_img
spot_imgspot_img

ವಿಟ್ಲ : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

- Advertisement -
- Advertisement -

ವಿಟ್ಲ : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಡಿ. 31 ಮತ್ತು ಜ.1 ನೇ ಸೋಮವಾರದಂದು ನಡೆಯಿತು.

ಡಿ. 31 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ ಬಳಿಕ ಕಲಶಾಭಿಷೇಕ ನಡೆದು ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ , ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಂಗಪೂಜೆ, ದುರ್ಗಾಪೂಜೆ, ಉತ್ಸವಬಲಿ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಿತು.

ಜ.1 ರಂದು ಬೆಳಿಗ್ಗೆ ಶ್ರೀ ಭೂತಬಲಿ, ದರ್ಶನ ಬಲಿ ರಾಜಾಂಗಣ ಪ್ರಸಾದ, ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ಕಲಶ ಪೂರಣೆ, ಪೇಟೆ ಸವಾರಿ, ಶುದ್ದ ಕಲಶಾಭಿಶೇಕ, ರಾತ್ರಿ ಪೂಜೆ, ಬಳಿಕ ಮಂತ್ರಾಕ್ಷತೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!