Tuesday, July 28, 2026
spot_imgspot_img
spot_imgspot_img

ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿರವರ ದುಬೈ ಪ್ರವಾಸಕ್ಕೆ ಅಧಿಕಾರಿಗಳಿಂದ ತಡೆ!!

- Advertisement -
- Advertisement -

ಬೆಂಗಳೂರು: ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಅವರ ದುಬೈ ಪ್ರವಾಸಕ್ಕೆ ಅಧಿಕಾರಿಗಳು ತಡೆ ಒಡ್ಡಿದ ಘಟನೆ ವರದಿಯಾಗಿದೆ. ಉದ್ಯಮಿ ಬಿ ಆರ್ ಶೆಟ್ಟಿ ಅವರು ತಮ್ಮ ಕುಟುಂಬ ಸದಸ್ಯರ ಜತೆ ಎತಿಹಾದ್ ಏರ್ ಲೈನ್ಸ್ ನಲ್ಲಿ ತೆರಳಲು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬಿ. ಆರ್ ಶೆಟ್ಟಿ ಅವರು ಪ್ರಯಾಣ ಬೆಳಸದಂತೆ ಅಧಿಕಾರಿಗಳು ಅವರನ್ನು ತಡೆದಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬಿ. ಆರ್ ಶೆಟ್ಟಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರ ಪತ್ನಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆರ್ಥಿಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ದೇಶ ಬಿಟ್ಟು ತೆರಳದಂತೆ ಬಿ. ಆರ್ ಶೆಟ್ಟಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!