Friday, April 26, 2024
spot_imgspot_img
spot_imgspot_img

ಗ್ಯಾಸ್ ಗೀಸರ್​ ಸೋರಿಕೆಯಾಗಿ ವಿದ್ಯಾರ್ಥಿನಿ ಸಾವು!

- Advertisement -G L Acharya panikkar
- Advertisement -
driving

ಬೆಂಗಳೂರು: ಗ್ಯಾಸ್ ಗೀಸರ್​ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ಸಂಪದ (23) ಎನ್ನಲಾಗಿದೆ. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು.

ಸ್ನಾನ ಮಾಡಲು ಮಧ್ಯಾಹ್ನ 12.30ಕ್ಕೆ ಬಾತ್ ರೂಮ್ ಗೆ ಹೋಗಿದ್ದ ವಿದ್ಯಾರ್ಥಿನಿ 2 ಗಂಟೆಯಾದರೂ ಹೊರಬಂದಿರಲಿಲ್ಲ. ಅನುಮಾನದಿಂದ ಬಾತ್​ ರೂಮ್​ ಬಾಗಿಲು ಒಡೆದು ನೋಡಿದಾಗ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡಿತ್ತು. ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಈ ಘಟನೆ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!