Thursday, August 6, 2026
spot_imgspot_img
spot_imgspot_img

ಬೆಂಗಳೂರು: (ಫೆ.26) ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ (ರಿ) ವತಿಯಿಂದ ಮಹಾಶಿವರಾತ್ರಿ 5ನೇ ಮಹೋತ್ಸವ ಅದ್ದೂರಿ ಕಾರ್ಯಕ್ರಮ

- Advertisement -
- Advertisement -

ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ (ರಿ) ವತಿಯಿಂದ ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿಯವರ ನೇತೃತ್ವದಲ್ಲಿ ಮಹಾಶಿವರಾತ್ರಿ 5ನೇ ಮಹೋತ್ಸವ ಅದ್ದೂರಿ ಕಾರ್ಯಕ್ರಮ ಫೆ 26 ನೇ ಬುಧವಾರ ಬೆಳಗ್ಗಿನಿಂದ ಮರುದಿನ ಬೆಳಗ್ಗೆ 6 ರವರೆಗೆ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ H A L 3 ನೇ ಹಂತ, ಹೊಸ ತಿಪ್ಪಸಂದ್ರ ಬೆಂಗಳೂರಿನಲ್ಲಿ ನಡೆಯಲಿದೆ.

ಫೆ. 25 ನೇ ಮಂಗಳವಾರದಂದು ಹೊಸ ತಿಪ್ಪಸಂದ್ರಸ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಲಿಂಗವನ್ನು 108 ಕುಂಭ ಕಳಸ ಮತ್ತು ವಿವಿಧ ಸಂಸ್ಕೃತಿಕ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಶಿಶು ಆಟದ ಮೈದಾನಕ್ಕೆ ತರಲಾಗುವುದು.

ಫೆ. 26 ರಂದು ಬೆಳಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪಂಚಗವ್ಯ ಪುಣ್ಯಾಹವಾಚನ ಶಿವಲಿಂಗ ಪ್ರತಿಷ್ಠಾಪನೆ ಶಿವಲಿಂಗ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಶತ ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ, ಶತ ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ ನಡೆಯಲಿದೆ.

ಬಳಿಕ ಗಂಟೆ 10 ರಿಂದ ಮೇಕಲೆ ಹೋಮದ ಕುಂಡದಲ್ಲಿ ಅರಣಿ ಮಥನದೊಂದಿಗೆ ಅಗ್ನಿ ಜನನ ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ 4 ಗಂಟೆಗೆ ರುದ್ರಪಾರಾಯಣ ಸಹಿತ ಬಹು ಅಭಿಷೇಕಗಳು ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಉತ್ಸವ ಬಲಿ, ನಂತರ ಅಲಂಕಾರ ಅಷ್ಟ್ರಾವದಾನ ಸೇವೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6 ಗಂಟೆಗೆ ಭದ್ರಕಾಲೀ ಪೂಜೆ, ಅಘೋರ ಹೋಮ ನಂತರ ಶ್ರೀ ಮಹಾಲಿಂಗೇಶ್ವರ ರಥೋತ್ಸವ ನಡೆಯಲಿದೆ.

ರಾತ್ರಿ 9 ಗಂಟೆಗೆ ಪ್ರಥಮ ಯಾಮದ ಪೂಜೆ, ಮತ್ತು ಅಭಿಷೇಕ, ಜೊತೆಗೆ ರುದ್ರಪಾರಾಯಣ ಹಾಗೂ ಬಹು ಅಭಿಷೇಕಗಳು ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ 2 ಗಂಟೆಗೆ ದ್ವಿತೀಯ ಯಾಮದ ಪೂಜೆ ಮತ್ತು ಅಭಿಷೇಕ ಜೊತೆಗೆ ರುದ್ರಪಾರಾಯಣ ಹಾಗೂ ಬಹು ಅಭಿಷೇಕಗಳು ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಮರುದಿನ ಬೆಳಗ್ಗೆ 4 ಗಂಟೆಗೆ ತೃತೀಯ ಯಾಮದ ಪೂಜೆ, ಮತ್ತು ಅಭಿಷೇಕ ಜೊತೆಗೆ ರುದ್ರಪಾರಾಯಣ ಹಾಗೂ ಬಹು ಅಭಿಷೇಕಗಳು ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಫೆ. 26 ನೇ ಬುಧವಾರದಂದು ರಾತ್ರಿ 8.30 ರಿಂದ 10.30 ರವೆರೆಗೆ ನೃತ್ಯಪದ ಜಾಗರಣೆ, 10 ರಿಂದ 2.30 ರವೆರೆಗೆ ಗಾನಪದ ಜಾಗರಣೆ ಹಾಗೂ 2.30 ರಿಂದ 5.30 ರವರೆಗೆ ಜಾನಪದ ಜಾಗರಣೆ ನಡೆಯಲಿದೆ.

ವಿಶೇಷ ಸೂಚನೆ: ಮಹಾ ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಫೆ. 26 ನೇ ಬುಧವಾರದಂದು ಬೆಳಗ್ಗೆ 9 ಗಂಟೆಯಿಂದ ಫೆ. 27 ರಂದು ಬೆಳಗ್ಗೆ 6 ಗಂಟೆಯವೆರೆಗೆ ಉಪವಾಸ (ವ್ರತ) ಆಚರಿಸುವ ಭಕ್ತರು ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಿರಿಧಾನ್ಯಗಳಿಂದ ತಯಾರಿಸಿದ ಪ್ರಸಾದವನ್ನು ವಿತರಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ (ರಿ) ಇದರ ಅಧ್ಯಕ್ಷರು ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿಯವರು ತಿಳಿಸಿದ್ದಾರೆ.

- Advertisement -

Related news

error: Content is protected !!