Sunday, June 21, 2026
spot_imgspot_img
spot_imgspot_img

ವರದಕ್ಷಿಣೆ ಕಿರುಕುಳ: ಹೆಂಡತಿಯನ್ನು ವೆಲ್ ನಿಂದ ಕತ್ತು ಹಿಸುಕಿ ಕೊಂದ ಪತಿ ಮಹಾಶಯ

- Advertisement -
- Advertisement -
vtv vitla

ಬೆಂಗಳೂರು: ವರದಕ್ಷಿಣೆ ಹಣ ತರುವಂತೆ ಪತ್ನಿಯನ್ನು ಹಿಂಸಿಸುತ್ತಿದ್ದ ಪತಿ ಮಹಾಶಯ ಇದೀಗ ಪತ್ನಿಯ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ. ಸೌಮ್ಯ ಪತಿಯಿಂದ ಕೊಲೆಯಾದ ಮಹಿಳೆ. ಸೌಮ್ಯ ಹಾಗೂ ಯೋಗೀಶ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಯೋಗೀಶ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಪದೇ ಪದೇ ಹಿಂಸಿಸುತ್ತಿದ್ದ. ಪತಿಯ ಕಾಟ ತಾಳಲಾರದೇ ಸೌಮ್ಯ ಎರಡು ಬಾರಿ ಹಣ ತಂದು ಕೊಟ್ಟಿದ್ದಳಂತೆ. ಇಷ್ಟಾದರೂ ವರದಕ್ಷಿಣೆ ದಾಹ ಕಡಿಮೆಯಾಗಿರಲಿಲ್ಲ. ಮತ್ತೆ ಮತ್ತೆ ಹಣಕ್ಕಾಗಿ ಪತ್ನಿಗೆ ಸತಾಯಿಸಿದ್ದಾನೆ. 2 ಲಕ್ಷ ಹಣ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ನಡೆದು ಪತ್ನಿ ಮೇಲೆ ಹಲ್ಲೆ ನಡೆಸಿದ ಯೋಗೇಶ್ ಆಕೆಯ ವೇಲ್ ನಿಂದಲೆ ಕತ್ತು ಬಿಗಿದು ಹತ್ಯೆಗೈದಿದ್ದಾನೆ.

- Advertisement -

Related news

error: Content is protected !!