Monday, June 15, 2026
spot_imgspot_img
spot_imgspot_img

ಬೆಂಗಳೂರು: ನಕಲಿ ಐಡಿ ಬಳಸಿ ರೈಲ್ವೆ ಟಿಕೆಟ್​ ಬುಕ್ಕಿಂಗ್: 10 ಆರೋಪಿಗಳ ಬಂಧನ!

- Advertisement -
- Advertisement -

ಬೆಂಗಳೂರು: ಭಾರತೀಯ ರೈಲ್ವೆ ಮಂಡಳಿಯ (ಐಆರ್ಟಿಸಿಎಲ್‌) ನಕಲಿ ಐಡಿ ಸೃಷ್ಟಿಸಿ ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮೂಲಕ ಹಣ ಗಳಿಸುತ್ತಿದ್ದ 10 ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹತ್ತು ಕಡೆ ಏಕಕಾಲಕ್ಕೆ ದಾಳಿ‌ ನಡೆಸಲಾಗಿದ್ದು, ಬಂಧಿತರಿಂದ 7.70 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌. 27 ಐಆರ್ಸಿಟಿಎಲ್ ಐಡಿಗಳು ಪತ್ತೆಯಾಗಿವೆ. ಬೆಂಗಳೂರಿನ ಕೆಂಗೇರಿ,‌ ಮಾಗಡಿ‌‌ ರೋಡ್, ಚಿಕ್ಕಪೇಟೆ, ತಾವರೆಕೆರೆ, ರಾಮಮೂರ್ತಿ ನಗರ ಹಾಗೂ ರಾಮನಗರದಲ್ಲಿ ಆನ್ಲೈನ್ ಮೂಲಕ ಅನಧಿಕೃತವಾಗಿ ರೈಲ್ವೆ ಬುಕ್ಕಿಂಗ್ ನಡೆಯುತ್ತಿತ್ತು.

ಹಲವು ವರ್ಷಗಳಿಂದ ಆರೋಪಿಗಳು ಅನಧಿಕೃತವಾಗಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಬೆಂಗಳೂರು, ಕಂಟ್ಮೊನೆಂಟ್, ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!