- Advertisement -
- Advertisement -


ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಕೆಳಗೆ ತುಂಬಿ ತುಳುಕಿ ಹರಿಯುತ್ತಿರುವ ನೇತ್ರಾವತಿ ನದಿಗೆ ಬಿದ್ದ ಪಾರಿವಾಳವನ್ನು ಕಂಡ ಗೂಡಿನಬಳಿ ಮೊಹಮ್ಮದ್ ಮಮ್ಮು ತಂಡದವರು ತಕ್ಷಣ ಸೇವಾಂಜಲಿ ದೋಣಿ ಮೂಲಕ ಧಾವಿಸಿ ಪಾರಿವಾಳವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಕಾರ್ಯಚರಣೆಯಲ್ಲಿ ಮೊಹಮ್ಮದ್ ಮಮ್ಮು,ಇರ್ಷಾದ್ ಮತ್ತು ಅಪ್ಪು ಭಾಗವಹಿಸಿದ್ದರು. ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಎಲ್ಲಡೆಗಳಿಂದ ಜನರು ಪ್ರಶಂಸೆಗಳ ಮಾತುಗಳನ್ನಾಡುತ್ತಿದ್ದಾರೆ. ಇದೇ ತಂಡ ಆರೇಳು ತಿಂಗಳ ಹಿಂದೆ ನದಿಗೆ ಬಿದ್ದ ಬಡಪಾಯಿ ನಾಯಿಮರಿಯನ್ನು ಅದೇ ಸೇವಾಂಜಲಿ ದೋಣಿಯ ಮೂಲಕ ರಕ್ಷಿಸಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.



- Advertisement -








