Tuesday, July 21, 2026
spot_imgspot_img
spot_imgspot_img

ಬಂಟ್ವಾಳ: ಹೆಸರಾಂತ ನಾಟಿ ವೈದ್ಯರು ಸೋಮನಾಥ ಪಂಡಿತ್‌ ಅನಂತಾಡಿಯವರಿಗೆ ಸಿಗ್ನೇಚರ್‌ ಮೀಡಿಯಾ ಹೌಸ್‌ ಸೀಸನ್‌-2 ರ 2025 ನೇ ಸಾಲಿನ ಕರ್ನಾಟಕ ಹೆಲ್ತ್‌ಕೇರ್‌ ’ವೈದ್ಯ ವಿಭೂಷಣ ಪ್ರಶಸ್ತಿ’

- Advertisement -
- Advertisement -

ಬಂಟ್ವಾಳ: ಸಿಗ್ನೇಚರ್‌ ಮೀಡಿಯಾ ಹೌಸ್‌ ಸೀಸನ್‌-2 ರ 2025 ನೇ ಸಾಲಿನ ಕರ್ನಾಟಕ ಹೆಲ್ತ್‌ಕೇರ್‌ ’ವೈದ್ಯ ವಿಭೂಷಣ ’ಪ್ರಶಸ್ತಿಗೆ ವಂಶ ಪಾರಂಪರಿಕ ಹೆಸರಾಂತ ನಾಟಿ ವೈದ್ಯರು ಸೋಮನಾಥ ಪಂಡಿತ್‌ ಅನಂತಾಡಿಯವರು ಆಯ್ಕೆಯಾಗಿದ್ದು, ಇದರ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.

ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಬೈರ ಪಂಡಿತ್‌ ನಾಟಿ ವೈದ್ಯಾಲಯ ಆರ್ಯುರ್ವೇದ ನಾಟಿ ಔಷಧ- ಚಿಕಿತ್ಸೆ ನೀಡುವುದರ ಮೂಲಕ ಪ್ರಸಿದ್ಧವಾಗಿದೆ. ದಿ. ಬೈರ ಪಂಡಿತ್‌ರವರ ಕಾಲಘಟ್ಟದಲ್ಲಿ ಸರಳ ಆಯುರ್ವೇದ ಚಿಕಿತ್ಸೆಯ ಮೂಲಕ ಪ್ರಾರಂಭಗೊಂಡ ಈ ವೈದ್ಯಾಲಯ ಇದೀಗ ಅವರ ಮಗ ಸೋಮನಾಥ ಪಂಡಿತ್‌ ಹಾಗೂ ಅವರ ಮಕ್ಕಳಾದ ಲಕ್ಷಣ್‌ ಪಂಡಿತ್‌ ಹಾಗೂ ವಿಶ್ವನಾಥ ಪಂಡಿತ್‌ರವರು ಪಾರಂಪರಗಾತವಾಗಿ ಮುಂದುವರೆಸಿಕೊಂಡು ಬಂದಿರುತ್ತಾರೆ. ಮನುಷ್ಯನ ದೇಹದಲ್ಲಿ ಕಾಡುವ ಎಲ್ಲಾ ಖಾಯಿಲೆಗಳಿಗೆ ಹಳ್ಳಿಮದ್ದಿನ ಮೂಲಕ ಸೂಕ್ತ ಔಷಧ ಚಿಕಿತ್ಸೆ ನೀಡಲಾಗುವುದು. ವಂಶ ಪಾರಂಪರಿಕವಾಗಿ ಸಾಗಿ ಬಂದ ಆಯುರ್ವೇದ ನಾಟಿ ವೈದ್ಯಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.

ವಾರದ ಪ್ರತೀ ದಿನ ಅನಂತಾಡಿ ಉಳ್ಳಾಲ್ತಿ ದೈವಸ್ಥಾನದ ಬಳಿ ಬಂಟ್ರಿಂಜದಲ್ಲಿ ಹಾಗೂ ಪ್ರತೀ ಶನಿವಾರ ಮಾಣಿ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಔಷಧ ಚಿಕಿತ್ಸೆಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
98808 68810

- Advertisement -

Related news

error: Content is protected !!