- Advertisement -
- Advertisement -
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಮಿತಾ ಡಿ ಪೂಜಾರಿಯವರಿಂದ ಧ್ವಜರೋಹಣ


ನೆಟ್ಲಮುಡ್ನೂರು: ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಮಿತಾ ಡಿ ಪೂಜಾರಿ ಧ್ವಜಾರೋಹಣವನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನುಷಾ ಡಿ ಅವರು ಸ್ವಾಗತಿಸಿದರು, ಸದಸ್ಯರಾದ ಶ್ರೀಧರ್ ರೈ, ಅಶೋಕ್ ರೈ, ಧನಂಜಯ ಗೌಡ, ಶ್ರೀಮತಿ ಪ್ರೇಮ, ಶ್ರೀಮತಿ ಶಕಿಲ, ಶ್ರೀಮತಿ ಲಕ್ಷ್ಮಿ, ಶ್ರೀಮತಿ ಸುಜಾತ, ಶ್ರೀಮತಿ ಶಾಲಿನಿ, ಸಿಬ್ಬಂದಿಗಳಾದ ಉಪೇಂದ್ರ ಆಚಾರ್ಯ, ಶಶಿಧರ, ಶ್ರೀಮತಿ ಸೌಮ್ಯ, ಶ್ರೀಮತಿ ದೀಪ್ತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ರಾಮಚಂದ್ರ ಮಾಸ್ಟರ್ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
- Advertisement -








