Saturday, July 25, 2026
spot_imgspot_img
spot_imgspot_img

ಬೆಳಗಾವಿ: ಕಸದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ – ಆರೋಪಿ ಬಂಧನ

- Advertisement -
- Advertisement -

ಬೆಳಗಾವಿ: ಕಸದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಿರಾತಕನನ್ನು ಬಂಧಿಸಿ, ಪೊಲೀಸರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ 900 ಬಾಕ್ಸ್ ಜಪ್ತಿ ಮಾಡಿ, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕ್ಯಾಂಟರ್ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ. ಪೊಲೀಸರನ್ನ ಯಾಮಾರಿಸಲು ಕಸದ ಒಳಗೆ ಮದ್ಯ ಇಟ್ಟು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿದ್ದ. ಈ ವೇಳೆ ಬೆಳಗಾವಿಯ ಶ್ರೀನಗರಕ್ಕೆ ಬರುತ್ತಿದ್ದಂತೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಮಾಳಮಾರುತಿ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ 900 ಬಾಕ್ಸ್ ವಶಪಡಿಸಿಕೊಂಡು, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ನಗರ ಪೊಲೀಸ್ ಆಯಕ್ತರು ಭರ್ಜರಿ ಬೇಟೆಯಾಡಿದ ಇನ್ಸ್‌ಪೆಕ್ಟರ್‌ ಬಿ.ಆರ್. ಗಡ್ಡೇಕರ್ ಹಾಗೂ ಮಾಳಮಾರುತಿ ಪೊಲೀಸರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

- Advertisement -

Related news

error: Content is protected !!