- Advertisement -
- Advertisement -



ಬಳ್ಳಾರಿ: ಕಾಣೆಯಾಗಿದ್ದ ಯುವಕನ ಶವವು ಚೀಲವೊಂದರಲ್ಲಿ ತುಂಡು ತುಂಡಾಗಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಬೀರಬ್ಬಿ ಗ್ರಾಮದಲ್ಲಿ ನಡೆದಿದೆ.
ಬೀರೇಶ್(25) ಕೊಲೆಯಾದ ಯುವಕ. ಬೀರೇಶ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ. ಕಾಣೆಯಾಗಿದ್ದ ಬೀರೇಶ್ಗಾಗಿ ಆತನ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಸಂಜೆ ಆತನ ಶವ ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮನೆಯಲ್ಲಿ ಪ್ರಾಣಿ ಸತ್ತಂತೆ ವಿಪರೀತ ವಾಸನೆ ಬರುತ್ತಿದ್ದರಿಂದ ಹುಡುಕಾಡಿದಾಗ, ಚೀಲದಲ್ಲಿ ತುಂಬಿಟ್ಟಿದ್ದ ಶವದ ಭಾಗಗಳು ಪತ್ತೆಯಾಗಿದ್ದು,ಶವವು ಸಂಪೂರ್ಣವಾಗಿ ಕೊಳೆತು ಹೋಗಿತ್ತು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವಿಜಯನಗರ ಎಸ್ಪಿ ಜಾಹ್ನವಿ ಘಟನೆಗೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
- Advertisement -








