Thursday, June 18, 2026
spot_imgspot_img
spot_imgspot_img

ಬೆಳ್ತಂಗಡಿ : ನೀರಿನ ಟ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನ ಬಳಿ ನಡೆದಿದೆ.

ಮೇ. 13ರ ಬೆಳಿಗ್ಗೆ ಈ ಟ್ಯಾಂಕ್‌ನಿಂದ ಸ್ಥಳೀಯ ಪರಿಸರದಲ್ಲಿ ನೀರು ಪೂರೈಕೆ ಮಾಡಲಾಗಿದ್ದು, ನೀರು ದುರ್ವಾಸನೆ ಬರುತ್ತಿರುವುದನ್ನು ಸಾರ್ವಜನಿಕರು ಪಂಚಾಯತ್ ಗಮನಕ್ಕೆ ತಂದು ಟ್ಯಾಂಕ್ ಪರಿಶೀಲಿಸಿದಾಗ ಒಳಗೆ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ತೇಲಾಡುತ್ತಿರುವುದು ಪತ್ತೆಯಾಗಿದೆ. ಶವ ಕೊಳೆತು ಹೋಗಿದ್ದು, ಸುಮಾರು ನಾಲ್ಕು ದಿನಗಳ ಹಿಂದೆ ಈತ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.

ಟ್ಯಾಂಕ್ ನೀರನ್ನು ಸಾರ್ವಜನಿಕ ಉಪಯೋಗಿಸುತ್ತಿದ್ದು, ವಾಟ್ಸಪ್ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಮಸ್ಥರು ಈ ನೀರು ಬಳಸಿದಂತೆ ವಿನಂತಿಸುತ್ತಿದ್ದಾರೆ.

ಕಾಯರ್ತಡ್ಕದ ವೈನ್ ಶಾಪ್ ಒಂದರಲ್ಲಿ ಕೆಲಸಕ್ಕಿದ್ದ ಹಿಂದಿ ಮಾತನಾಡುವ ಉತ್ತರ ಭಾರತದ ವ್ಯಕ್ತಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಮೃತ ವ್ಯಕ್ತಿ ಈತನೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!