Thursday, April 18, 2024
spot_imgspot_img
spot_imgspot_img

ಕೋವಿಡ್ ಕೇರ್ ಸೆಂಟರ್ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು; ಆರೋಪಿ ಸೆರೆ!

- Advertisement -G L Acharya panikkar
- Advertisement -

ಬೇಲೂರು: ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದಲ್ಲಿ ಮೇ10 ರಂದು ಕೋವಿಡ್ ಟೆಸ್ಟ್ ಮಾಡಿಸಲು ದೊಡ್ಡಸಲವರ ಗ್ರಾಮದ ನಿವಾಸಿ ಅಬ್ದುಲ್ ಮೋಮಿನ್ ಅವರು ಅರೇಹಳ್ಳಿಯ ಕೋವಿಡ್ ಕೇರ್ ಸೆಂಟರ್ ಗೆ ತೆರಳಿದ್ದ ಸಂದರ್ಭ ಕೋವಿಡ್ ಸೆಂಟರ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಅರೇಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದರು.

ಬೈಕ್ ಮಾಲೀಕನ ದೂರಿನ ಮೇರೆಗೆ ತನಿಖೆ ನಡೆಸಿದ ಅರೇಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಮತ್ತು ಅವರ ತಂಡ ಬಿಕ್ಕೊಡು ಹೋಬಳಿ ಹೊಸಳ್ಳಿ ಗ್ರಾಮ ಮೂಲದ ಸುಮಾರು 15 ವರ್ಷ ವಯಸ್ಸಿನ ಅಜಯ್ ಎಂಬುವನನ್ನು ಬಂಧಿಸಿದ್ದು ಈ ಹಿಂದೆ ಕಳ್ಳತನಮಾಡಿದ್ದ ಸುಮಾರು 6 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಗ್ರಾಮದ ಪೊಲೀಸ್ ಸಬ್ ಇನಸಪೆಕ್ಟರ್ ಮಹೇಶ್, ಎ ಎಸ್ ಐ ಶಿವರಾಂ, ಪೊಲೀಸ್ ಸಿಬ್ಬಂದಿಗಳಾದ ಜಗದೀಶ್, ಚಂದ್ರಪ್ಪ , ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!