Tuesday, April 20, 2021
spot_imgspot_img
spot_imgspot_img

ಬಂಗಾಳದಲ್ಲಿ ಗಮನಸೆಳೆದ ‘ಮಾ’ ಕ್ಯಾಂಟೀನ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆರಂಭವಾಗಿರುವ ಮಮತಾ ಬ್ಯಾನರ್ಜಿ ಸರ್ಕಾರದ ‘ಮಾ’ ಕ್ಯಾಂಟೀನ್ ಜನಸಾಮಾನ್ಯರಿಗೆ ಉತ್ತಮವಾದ ಆಹಾರ ನೀಡುವ ಮೂಲಕ ಗಮನಸೆಳೆಯುತ್ತಿದೆ.

2021ರ ಫೆಬ್ರವರಿ ತಿಂಗಳಲ್ಲಿ ಬಂಗಾಳದಲ್ಲಿ ಹೊಸದಾಗಿ ‘ಮಾ’ ಕ್ಯಾಂಟೀನ್ ತೆರೆಯಾಲಾಗಿದೆ. ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ಊಟ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಾ ಕ್ಯಾಂಟೀನ್ ಮಧ್ಯಾಹ್ನ, 12.30 ರಿಂದ 3.00 ಗಂಟೆಯವರೆಗೆ ಜನರಿಗೆ ಊಟ, ಸಾಂಬಾರ್, ಕರಿ ಮತ್ತು ಮೊಟ್ಟೆ ಕರಿ ನೀಡುವ ಮೂಲಕ ಹಸಿದವರಿಗೆ ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದೆ.

ನಾನು ಊಟಕ್ಕಾಗಿ 35 ರೂಪಾಯಿಯನ್ನು ಖರ್ಚು ಮಾಡಬೇಕಾಗಿತ್ತು. ಆದರೆ ಇದೀಗ ‘ಮಾ’ ಕ್ಯಾಂಟೀನ್ ನಮ್ಮಂತಹ ಬಡವರಿಗೆ ಕೇವಲ 5 ರೂಪಾಯಿಗೆ ಊಟ ನೀಡುತ್ತಿದೆ. ಈ ಆಹಾರವು ಬಹಳ ಚೆನ್ನಾಗಿದೆ ಎಂದು ಸೆಕ್ಯೂರಿಟಿಗಾರ್ಡ್ ಜಾಕೀರ್ ನಾಸ್ಕರ್ ಅಭಿಪ್ರಾಯ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಈಗಾಗಲೇ ‘ಮಾ’ ಕ್ಯಾಟೀಂನ್ ಗಾಗಿ 100 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಕಾಯ್ದಿರಿಸಿದೆ. ಪಶ್ಚಿಮ ಬಂಗಾಳ ಹೊರತು ಪಡಿಸಿ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಈಗಾಗಲೇ ಸರ್ಕಾರಿ ಕ್ಯಾಂಟೀನ್ ಗಳು ಜನರ ಹಸಿವನ್ನು ನೀಗಿಸುತ್ತಿದೆ.

- Advertisement -

MOST POPULAR

HOT NEWS

Related news

error: Content is protected !!