Monday, July 20, 2026
spot_imgspot_img
spot_imgspot_img

ಬ್ರೇಕಿಂಗ್ ನ್ಯೂಸ್ | ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಫಲಿತಾಂಶ-ಗಿಲ್ಲಿಗೆ ಒಲಿಯಿತೇ ಭಾಗ್ಯಲಕ್ಷ್ಮಿ ?-ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -
- Advertisement -


ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಅಂತಿಮ ಫಲಿತಾಂಶ ಹಾಗೂ ಬಹುಮಾನ ವಿವರಗಳು ಪ್ರಕಟವಾಗಿವೆ. ಫಿನಾಲೆಯ ಅಂತಿಮ ಹಂತದಲ್ಲಿ ಗಿಲ್ಲಿ ಪ್ರಥಮ ಸ್ಥಾನ ಪಡೆದು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿದ್ದಾರೆ. ವಿಜೇತ ಗಿಲ್ಲಿಗೆ 50 ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಯಾ ಕಾರು ಬಹುಮಾನವಾಗಿ ಗೆದ್ದುಕೊಂಡರು.


ಫಿನಾಲೆಯಲ್ಲಿ ರಘು 5ನೇ ಸ್ಥಾನ, ಕಾವ್ಯ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ವಿನಿ ಗೌಡ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದು, ಅವರು ವಿವಿಧ ಟಾಸ್ಕ್‌ಗಳ ಮೂಲಕ ಒಟ್ಟು 14 ಲಕ್ಷ ರೂ. ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಮಂಗಳೂರು ಮೂಲದ ರಕ್ಷಿತಾ ಅವರು ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದು, 25 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡರು.
ಅದ್ಧೂರಿ ಫಿನಾಲೆಯೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಭರ್ಜರಿ ತೆರೆ ಬಿದ್ದಿದೆ.

- Advertisement -

Related news

error: Content is protected !!