Wednesday, September 2, 2026
spot_imgspot_img
spot_imgspot_img

ಗುಡುಗು ಸಹಿತ ಭಾರಿ ಮಳೆಗೆ ಸಿಡಿಲು ಬಡಿದು 13 ಮಂದಿ ಸಾವು!

- Advertisement -
- Advertisement -

ಪಾಟ್ನಾ: ದೇಶದ ಹಲವೆಡೆ ನಿನ್ನೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಬಿಹಾರದಲ್ಲಿ ಸಿಡಿಲು ಬಡಿದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಅನೇಕ ಜಾನುವಾರುಗಳು ಸಾವನ್ನಪ್ಪಿವೆ.

ಭಾಗಲ್ಪುರ್ ಜಿಲ್ಲೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹೋದ ನಾಲ್ವರು ಮರದಡಿ ನಿಂತಿದ್ದ ವೇಳೆ ಸಿಡಿಲು ಹೊಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸುಪೌಲ್​ ಜಿಲ್ಲೆ ಹಾಗೂ ಸಮಸ್ತಿಪುರ ಜಿಲ್ಲೆಯಲ್ಲಿ ತಲಾ ಒಬ್ಬರು, ಜಮುಯಿ ಜಿಲ್ಲೆಯಲ್ಲಿ ಓರ್ವ ಯುವಕ ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ. ಬಂಕಾದಲ್ಲಿ ಓರ್ವ ವ್ಯಕ್ತಿ, ಮುಂಗರ್‌ನಲ್ಲಿ ಮಗು ಸೇರಿದಂತೆ ಮೂವರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!