Sunday, June 7, 2026
spot_imgspot_img
spot_imgspot_img

ಮಂಗಳೂರು: ಕಾರಿಗೆ ಬೈಕ್ ಢಿಕ್ಕಿ – ಕಾರು ಚಾಲಕ ಪರಾರಿ

- Advertisement -
- Advertisement -

ಮಂಗಳೂರು: ಕಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆ ಬದಿಗೆ ಬಿದ್ದಿದ್ದು, ಕಾರು ಚಾಲಕ ಪರಾರಿಯಾಗಿರುವ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ.

ಬೊಂದೇಲ್ ನಿವಾಸಿ ಅಲಿಸ್ಟರ್ ತೌರೋ ಗಾಯಾಳು ಬೈಕ್ ಸವಾರ ಎಂದು ತಿಳಿದು ಬಂದಿದೆ.
ಯೆಯ್ಯಾಡಿಯಲ್ಲಿ ಕಾರು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ಬೈಕ್ ಸವಾರ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ, ಹಿಂದಿನಿಂದ ಬಂದ ಎರಡು ಕಾರು ಚಾಲಕರು ಕೂಡಾ ನೋಡಿಯೂ ನಿಲ್ಲಿಸದೇ ಹೋಗಿದ್ದಾರೆ.

ಡೆಕೋರೇಟರ್ ಆಗಿ ಕೆಲಸ ಮಾಡುತ್ತಿರುವ ಬೈಕ್ ಸವಾರ ಕೆಲಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!