Saturday, June 13, 2026
spot_imgspot_img
spot_imgspot_img

ಬೈಕ್ – ಲಾರಿ ಡಿಕ್ಕಿ; ಸವಾರ ಮೃತ್ಯು..!

- Advertisement -
- Advertisement -

ಕಂಟೇನ‌ರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾವಿಹೊಳೆ ಕ್ರಾಸ್‌ನಲ್ಲಿ ನಡೆದಿದೆ.

ಮೃತಪಟ್ಟ ಯುವಕ ಗರ್ತಿಕೆರೆಯ ಕಮ್ಮಚ್ಚಿ ರಸ್ತೆ ನಿವಾಸಿ ಶಮಂತ್ (25) ಎಂದು ಗುರುತಿಸಲಾಗಿದೆ.

ಕಂಟೇನ‌ರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಹೊಸನಗರ ಕಡೆಯಿಂದ ಸಾಗರ ಕಡೆಗೆ ಕಂಟೇನರ್ ಲಾರಿ ಹೋಗುತ್ತಿತ್ತು.ಸಾಗರ ಕಡೆಯಿಂದ ಹೊಸನಗರ ಕಡೆಗೆ ಬೈಕ್ ಬರುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈತ ಚಿಕ್ಕಮಣತಿ ಗ್ರಾಮದ ಮುತ್ತೂರಿನಲ್ಲಿರುವ ಅಕ್ಕನ ಮನೆಗೆ ಮಜ್ಜಿಗೆ ಮೆಣಸಿನಕಾಯಿ ಕೊಟ್ಟು ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹೊಸನಗರ ಪೊಲೀಸ್ ಸ್ಟೇಷನ್ ಪಿಎಸ್‌ಐ ಶಿವಾನಂದ ಕೆ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!