Friday, April 26, 2024
spot_imgspot_img
spot_imgspot_img

*’ವೇಶ್ಯಾವಾಟಿಕೆ ಅಪರಾಧವಲ್ಲ’: ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಆದೇಶ, ಮೂವರು ಲೈಂಗಿಕ ಕಾರ್ಯಕರ್ತೆಯರ ಬಿಡುಗಡೆಗೆ ಅಸ್ತು.*

- Advertisement -G L Acharya panikkar
- Advertisement -

ಮುಂಬೈ: ವೇಶ್ಯಾವಾಟಿಕೆ ಎಂಬುದು ಕಾನೂನಿನ ಪ್ರಕಾರ , ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ ಎಂಬುದನ್ನು ಗಮನಿಸಿದ ಬಾಂಬೆ ಹೈಕೋರ್ಟ್, ಮುಂಬೈಯ ಸರ್ಕಾರದ ಸಂತ್ರಸ್ಥರ ನಿಲಯದಲ್ಲಿ ಬಂಧಿತರಾಗಿರುವ ಮೂವರು ಮಹಿಳಾ ಲೈಂಗಿಕ ಕಾರ್ಯಕರ್ತೆಯರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಇದೇ ವೇಳೆ ನ್ಯಾಯಾಪೀಠ ಕಾನೂನಿನ ಪ್ರಕಾರ ವೇಶ್ಯಾವಾಟಿಕೆಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಸುವ ಯಾವುದೇ ಅವಕಾಶಇಲ್ಲ. ಆದರೆ, ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಯಾವುದೇ ವ್ಯಕ್ತಿಯನ್ನು ಮೋಸ ಮಾಡುವುದು ಕಾನೂನು ಬಾಹಿರವಾಗಿದೆ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಗುರುವಾರ ಹೊರಡಿಸಿದ ಆದೇಶದಲ್ಲಿ ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರಿದ್ದ ಪೀಠ, ‘ಅನೈತಿಕ ಸಂಚಾರ (ತಡೆ) ಕಾಯ್ದೆ 1956ರ ಅನ್ವಯ ವೇಶ್ಯಾವಾಟಿಕೆಯನ್ನು ಅಪರಾಧ ಅಪರಾಧ ಎಂದು ಪರಿಗಣಿಸಲಾಗಿಲ್ಲ ಅಂತ ಹೇಳಿದೆ.

ಮಜ್ಗಾಂವ್ ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ತಮ್ಮ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೂವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚವಾಣ್ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ. ನ್ಯಾಯಮೂರ್ತಿ ಚವಾಣ್ ಅವರು ಮ್ಯಾಜಿಸ್ಟ್ರೇಟ್ ಆದೇಶಕ್ಕೆ ತಡೆ ನೀಡಿ. ‘ವಯಸ್ಕರ’ ಮಹಿಳೆಯರು ಮತ್ತು ‘ಮುಕ್ತವಾಗಿ ಓಡಾಡಲು ಮತ್ತು ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ಕಾನೂನಿನ ಪ್ರಕಾರ ಮಹಿಳೆಯರನ್ನು ವಿಚಾರಣೆಗೆ ಗುರಿಪಡಿಸುವ ಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಸಂತ್ರಸ್ಥರ ಮನೆಯಲ್ಲಿ ಅವರನ್ನು ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ‘ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಅಂತಿಮ ಆದೇಶವಿಲ್ಲದೆ, 1956ರ ಅನೈತಿಕ ಸಂಚಾರ (ತಡೆ) ಅಧಿನಿಯಮ, 1956 ರ ಅನ್ವಯ, ಮೂರು ವಾರಗಳ ವರೆಗೆ ಸಂತ್ರಸ್ತರ ಹೀಗೆ ವಶಕ್ಕೆ ನೀಡುವುದಕ್ಕೆ ಮ್ಯಾಜಿಸ್ಟ್ರೇಟರಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.

- Advertisement -

Related news

error: Content is protected !!