Friday, March 29, 2024
spot_imgspot_img
spot_imgspot_img

ಅಟಲ್ ಸುರಂಗದಲ್ಲಿ ಮೋಜು ಮಾಡುತ್ತಿದ್ದ ಯುವಕರ ಬಂಧನ

- Advertisement -G L Acharya panikkar
- Advertisement -

ವಿಶ್ವದ ಅತೀ ಎತ್ತರದಲ್ಲಿರುವ ಸುರಂಗ ಮಾರ್ಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾದ ಅಟಲ್ ಸುರಂಗದಲ್ಲಿ ಕಾರನ್ನ ನಿಲ್ಲಿಸಿ, ಇತರೆ ಪ್ರಯಾಣಿಕರಿಗೆ ತೊಂದರೆ ಮಾಡಿದ ಹಿನ್ನೆಲೆ 7 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವೇ 7 ಮಂದಿ ಅರೆಸ್ಟ್​ ಆಗಿದ್ದಾರೆ. ಮನಾಲಿ ಹಾಗೂ ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವನ್ನು ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ರು. ಸುರಂಗದೊಳಗೆ ವಾಹನಗಳನ್ನ ನಿಲ್ಲಿಸುವಂತಿಲ್ಲ ಎಂಬ ನಿಯಮವಿದೆ. ಆದ್ರೂ ಕೆಲವರು ಸುರಂಗದೊಳಗೆ ಕಾರ್ ನಿಲ್ಲಿಸಿ ಫೋಟೋ ಹಾಗೂ ವಿಡಿಯೋ ಮಾಡ್ತಿದ್ರು. ಜೊತೆಗೆ ಜೋರಾದ ಮ್ಯೂಸಿಕ್ ಹಾಕಿ ಡ್ಯಾನ್ಸ್​ ಮಾಡುತ್ತಿದ್ರು. ಇದರಿಂದ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಇತರೆ ಪ್ರಯಾಣಿಕರಿಗೆ ತೊಂದರೆಯಾಗಿತ್ತು

ಯುವಕರು ಡ್ಯಾನ್ಸ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಇದೀಗ 7 ಜನರನ್ನ ಬಂಧಿಸಲಾಗಿದ್ದು, ಮೂರು ಕಾರನ್ನ ಹಿಮಾಚಲ ಪೊಲೀಸರು ಸೀಜ್​ ಮಾಡಿದ್ದಾರೆ. ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Related news

error: Content is protected !!