Tuesday, July 21, 2026
spot_imgspot_img
spot_imgspot_img

ಕಡಬ: ರಿಟ್ಝ್ ಕಾರು ಹಾಗೂ ಬೊಲೆರೋ ನಡುವೆ ಅಪಘಾತ

- Advertisement -
- Advertisement -

ಕಡಬ: ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಅಪಘಾತ ಸಂಭವಿಸಿದ್ದು ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ನಡೆದಿದೆ.

ರಿಟ್ಝ್ ಕಾರು ಉಪ್ಪಿನಂಗಡಿ ಕಡೆಯಿಂದ ಹೊಸ್ಮಠ ಕಡೆಗೆ ಬರುತ್ತಿದ್ದು, ಪದವು – ಬಲ್ಯ ನಡುವೆ ತಿರುವಿನಲ್ಲಿ ಢಿಕ್ಕಿ ನಡೆದಿದೆ. ಘಟನೆಯಲ್ಲಿ ಹೊಸ್ಮಠ ಹಲ್ಲಂಗೇರಿ ನಿವಾಸಿ ನಿಕೋಲಸ್ ಮಾರ್ಟಿಸ್ ಎಂಬವರ ಪುತ್ರ ನವೀನ್ ಮಾರ್ಟಿಸ್(30) ಮೃತರಾಗಿದ್ದಾರೆ. ಕಾರಿನಲ್ಲಿದ್ದ ಮೃತರ ತಂದೆ ನಿಕೋಲಸ್ ಮಾರ್ಟಿಸ್, ತಾಯಿ ಸಿಸಿಲಿಯಾ ಲಸ್ರಾದೋ, ಸಹೋದರಿ ಸುಶ್ಮಾ ಮಾರ್ಟಿಸ್ ಹಾಗೂ ಪತ್ನಿ ಲವಿಟಾ ಲೋಬೋ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆಕರೆದೊಯ್ಯಲಾಗಿದೆ.

- Advertisement -

Related news

error: Content is protected !!