Monday, May 20, 2024
spot_imgspot_img
spot_imgspot_img

ಕ್ಯಾರೆಟ್ ಬಾದಾಮ್ ಮಿಲ್ಕ್ ಶೇಕ್‌

- Advertisement -G L Acharya panikkar
- Advertisement -

ಹೆಚ್ಚಿನ ಪ್ರಮಾಣದ ವಿಟಮಿನ್, ಪ್ರೋಟಿನ್ ಹೊಂದಿರುವ ಆಹಾರ, ತರಕಾರಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಕ್ಯಾರೆಟ್ ಬಾದಾಮ್ ಮಿಲ್ಕ್ ಶೇಕ್‌ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ – 1, ಮಧ್ಯಮ ಗಾತ್ರ
ಬಾದಾಮಿ – 10ರಿಂದ 12
ಖರ್ಜೂರ – 8ರಿಂದ 10
ಹಾಲು – ಅರ್ಧ ಲೀಟರ್
ಸಕ್ಕರೆ – ಅಗತ್ಯವಿರುವಂತೆ

ಮೊದಲಿಗೆ ಬಾದಾಮಿ ಹಾಗೂ ಖರ್ಜೂರವನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ. ಬಾದಾಮಿ ಚರ್ಮವನ್ನು ತೆಗೆದುಹಾಕಿ ಮತ್ತು ಪಕ್ಕಕ್ಕೆ ಇರಿಸಿ.
ಮಿಕ್ಸಿ ಜಾರಿನಲ್ಲಿ ಹೆಚ್ಚಿದ ಕ್ಯಾರೆಟ್ ಮತ್ತು ಸಿಪ್ಪೆ ತೆಗೆದ ಸ್ವಲ್ಪ ಬಾದಾಮಿಯನ್ನು ಅನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಖರ್ಜೂರ ಹಾಗೂ ಅದರ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹಾಲನ್ನು ಸೇರಿಸಿಕೊಂಡು ಕುದಿಯಲು ಬಿಡಿ.
ನಂತರ ಅದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ 2-3 ನಿಮಿಷ ಕುದಿಯಲು ಬಿಡಿ.
ಹಾಲು ಕುದಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕತ್ತರಿಸಿದ ಬಾದಾಮಿಯಿಂದ ಅಲಂಕರಿಸಿ . ಈಗ ಬಿಸಿಬಿಸಿ ಕ್ಯಾರೆಟ್ ಬಾದಾಮ್ ಮಿಲ್ಕ್ ಸವಿಯಲು ಸಿದ್ಧ

- Advertisement -

Related news

error: Content is protected !!