Saturday, April 27, 2024
spot_imgspot_img
spot_imgspot_img

ಚೆನ್ನೈ: ಭಾರತಕ್ಕೆ ತ್ರಿವಳಿ ಸ್ವರ್ಣ; ಏಷ್ಯನ್ ಕುಸ್ತಿಯಲ್ಲಿ ಮಹಿಳೆಯರೇ ಮೇಲುಗೈ!

- Advertisement -G L Acharya panikkar
- Advertisement -

ಚೆನ್ನೈ: ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ. ಜಪಾನ್ ಮತ್ತು ಚೀನೀ ಪ್ರತಿಸ್ಪರ್ಧಿಗಳ ಅನುಪಸ್ಥಿತಿಯಲ್ಲಿ ವಿನೇಶ್ ಅವರು 53 ಕೆಜಿ ವಿಭಾಗದಲ್ಲಿ ಒಂದೂ ಪಾಯಿಂಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದರು.


ಈ ಕ್ರೀಡಾಕೂಟದಲ್ಲಿ ದಿವ್ಯಾ ಕಕ್ರನ್ (72 ಕೆಜಿ) ಚಿನ್ನಗಳಿಸಿಕೊಂಡಿದ್ದು, ಹಾಗೂ ಸಾಕ್ಷಿ ಮಲಿಕ್ (65 ಕೆಜಿ) ಬೆಳ್ಳಿ ಪದಕಗಳಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರವಾಗಿದ್ದಾರೆ.

ಅನ್ಶು ಮಲಿಕ್ (57 ಕೆಜಿ) ಭಾರತಕ್ಕೆ ಇನ್ನೊಂದು ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಗುರುವಾರ ಸರಿತಾ ಮೊರ್ (59 ಕೆಜಿ) ಚಿನ್ನದ ಪದಕ ಗಳಿಸಿದ್ದರೆ, ಸೀಮಾ ಬಿಸ್ಲಾ (50 ಕೆಜಿ) ಮತ್ತು ಪೂಜಾ (76 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.

driving


ಈ ಆವೃತ್ತಿಯಲ್ಲಿ ಭಾರತ 4 ಚಿನ್ನ 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದಿದೆ. ಇದೆಲ್ಲವನ್ನೂ ಮಹಿಳೆಯರ ವಿಭಾಗದ ಸ್ಪರ್ಧೆಯಿಂದಲೇ ಪಡೆದದ್ದಾಗಿದೆ ಎನ್ನುವುದು ಗಮನಾರ್ಹ.

- Advertisement -

Related news

error: Content is protected !!