Tuesday, July 28, 2026
spot_imgspot_img
spot_imgspot_img

ಕರಾವಳಿಯ ಅಪ್ರತಿಮ ಕಲಾವಿದ ಚೇತನ್ ರೈ ಮಾಣಿ

- Advertisement -
- Advertisement -

ಚೇತನ್ ರೈ ಮಾಣಿ ಇವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡ ತುಳು ಸಿನೆಮಾದಲ್ಲಿ ಮನೆ ಮನೆ ಚಿರ ಪರಿಚಿತರು. ಒಬ್ಬ ಸಹಹೃದಯಿ ಕಲಾವಿದ ಕಲೆಯನ್ನೇ ಉಸಿರನ್ನಾಗಿರಿಸಿ ಯಾವ ಪಾತ್ರವನ್ನು ಬಹಳ ಶ್ರದ್ಧಾಭಕ್ತಿಯಿಂದ ಅಭಿನಯಿಸಿ ಭೇಷ್ ಎಂಬ ಬಿರುದು ಸಿಕ್ಕಂತ ವ್ಯಕ್ತಿತ್ವ ಉಲ್ಲಾ ಚೇತನ್ ರೈ ಮಣಿರವರು ಪರಿಸ್ಥಿತಿಯಿಂದ ಉತ್ಕೃಷ್ಟ ಸ್ಥಿತಿಗೆ ಏರಿದವರಿದ್ದಾರೆ.

ಅಭಿನಯ ಕಲೆಯನ್ನೇ ಉಸಿರಾಗಿ ಬಾಳಿ ಮೇರುಗಿರಿಯ ಶಿಖರದಲ್ಲಿ ಧ್ರುವ ನಕ್ಷತ್ರದಂತೆ ರಾರಾಜಿಸಿದ್ದವರಿದ್ದಾರೆ. ಜಗತ್ತಿನ ಜನರು ಎರಡು ಜಾಗತಿಕ ಯುದ್ಧಗಳಲ್ಲಿ ನಲುಗಿ, ಆರ್ಥಿಕ ಅಧಪತನದಿಂದಾಗಿ ಕನಲುತ್ತಿದ್ದಾಗ ಜಗತ್ತಿಗೆ ನಗಲು ಕಲಿಸಿದ್ದ, ಆಂಗ್ಲ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರ ಸಂಭಾಷಣೆಗಾರ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್. ಬಾಲ್ಯದಿಂದಲೇ ಅಭಿನಯ ಕಲೆಯತ್ತ ವಾಲಿದವರು. ಮೂರನೆ ತರಗತಿಯಲ್ಲಿರುವಾಗ ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತು ಕಂಸನ ಪಾತ್ರ ನಿರ್ವಹಿಸಿದವರು. ಪೌರಾಣಿಕ ನಾಟಕ ಚಕ್ರವ್ಯೂಹದ ಅಭಿಮನ್ಯು, ಐತಿಹಾಸಿಕ ನಾಟಕದ ವೀರ ಶಿವಾಜಿಯ ಪಾತ್ರಗಳಿಗೆ ಜೀವತುಂಬಿ ಗುರುಗಳ, ಹಿರಿಯರ ಪ್ರಶಂಸೆಗೆ ಪಾತ್ರರಾದವರು.

ಚೇತನ್ ರೈ ಅವರ ದೊಡ್ಡಪ್ಪ ರಾಮಣ್ಣ ರೈ ಪುತ್ತೂರು ನಾಟಕದ ಪ್ರೌಢ ಕಲಾವಿದರಾಗಿದ್ದವರು. ಅವರ ಸಲುಗೆ ಮತ್ತು ಪ್ರೇರಣೆಯಿಂದ ನಾಟಕಗಳಲ್ಲಿ ಅಭಿನಯಿಸ ತೊಡಗಿದವರು. ವರನಟ ಡಾ. ರಾಜ್ ಕುಮಾರ್ ಮತ್ತು ಖಳನಟ ವಜ್ರಮುನಿಯವರ ಅಭಿನಯವನ್ನು ಮೆಚ್ಚುವ ರೈ ಅವರು ಪ್ರತಿನಾಯಕನ ಪಾತ್ರಗಳನ್ನು ಹೆಚ್ಚು ಇಷ್ಟಪಟ್ಟು ಅಭಿನಯಿಸಿದವರು. ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಎಲ್ಲರಂತೆ ವಲಸಿಗರ ನಗರಿ ಮುಂಬೈಗೆ ಪಾದಾರ್ಪಣೆ ಮಾಡಿದವರು.

ತುಳು ಕನ್ನಡ ರಂಗಭೂಮಿ ಸಕ್ರಿಯವಾಗಿರುವ ಮುಂಬೈಯಲ್ಲಿ ಅಭಿನಯ ಮಂಟಪ ಸಂಸ್ಥೆಯ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಹಲವು ಚಾರಿತ್ರಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೋಟಿ ಚೆನ್ನಯದ ಪೆರುಮಳ ಬಲ್ಲಾಳ, ಕಲ್ಕುಡೆ ಕಲ್ಲುರ್ಟಿಯ ವೀರ ಶಂಬು ಕಲ್ಕುಡೆ, ಕೋಡ್ಲಬ್ಬು ತನ್ನಿಮಾನಿಗದ ಬಬ್ಬುಸ್ವಾಮಿ ಪಾತ್ರಗಳು ನಾಟಕ ರಸಿಕರ ಮನ ರಂಜಿಸಿವೆ. ಮಾಯಾನಗರಿಯಲ್ಲಿ ತನಗೆ ಅರಿಯದಂತೆ ಒಳಸುಳಿಗಳಿಗೆ ಸಿಕ್ಕಿ ಭೂಗತ ಲೋಕದ ಬಾಗಿಲ ತನಕ ಪಯಣ ಬೆಳೆಸಿದವರು. ಸಮಾಜ ಬಾಂಧವರಾದ ಪೋಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿಯವರ ಹಿತವಚನದಂತೆ ಮುಂಬೈಗೆ ನಮಿಸುತ್ತ ಶಾಶ್ವತವಾಗಿ ಊರಿಗೆ ಬಂದು ನೆಲೆ ನಿಂತವರು.

ಧರಿತ್ರಿ ಕಲಾವಿದೆರ್ ಮಂಗಳೂರು, ಮಹಾಲಕ್ಷ್ಮಿ ಕಲಾವಿದೆರ್ ಪುತ್ತೂರು, ನಮ್ಮ ಬೆದ್ರ ಕಲಾವಿದೆರ್ ಮೂಡಬಿದ್ರೆ, ವಿಜಯ ಕಲಾವಿದೆರ್ ಕಿನ್ನಿಗೋಳಿ ಮೊದಲಾದವುಗಳು. ಜಗದೀಶ್ ಶೆಟ್ಟಿ ಕೆಂಚನಕೆರೆ ಅವರುಗಳಂಥ ಶ್ರೇಷ್ಠ ನಿರ್ದೇಶಕರುಗಳ ಗರಡಿಯಲ್ಲಿ ಪಳಗುವ ಅವಕಾಶಗಳು ಪ್ರಾಪ್ತವಾದವು. ಬೈರಾಸ್ ಭಾಸ್ಕರೆ, ಬುದ್ದಿ ಬುಡಯೇ ಮುಂತಾದ ನಾಟಕಗಳ ಪಾತ್ರಗಳು ನಾಟಕ ರಸಿಕರ ಮನ ಸೂರೆಗೊಂಡವು, ಬುದ್ದಿ ಬುಡಯೇ ನಾಟಕದ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿ ತಾಳಿ ಕಿತ್ತುಕೊಳ್ಳುವ ಸನ್ನಿವೇಶವನ್ನು ಅಭಿನಯಿಸುತ್ತಿರುವಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಕಲ್ಲು ಬಿಸಾಡಿದ್ದರಂತೆ. ಈ ಪಾತ್ರಗಳ ಜನಪ್ರಿಯತೆಯಿಂದಾಗಿ ರೈ ಅವರಿಗೆ ರಂಗದಂಗಳವೇ ಬದುಕಾಯಿತು. ಅಭಿನಯವೇ ಕಾಯಕವಾಯಿತು. ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿಯ ಪರಮ ಪೂಜ್ಯ ಶ್ರೀಗಳು ಪ್ರತೀ ವರ್ಷ ಲಲಿತಪಂಚಮಿಯಂದು ಕೊಡುವ ಶ್ರೀದೇವಾನುಗ್ರಹ ಪ್ರಶಸ್ತಿಯೂ ಲಭಿಸಿದೆ. ಪ್ರಸ್ತುತ ಪರಮಪದ್ಮ ಕಲಾವಿದರು ಸಸಿಹಿತ್ಲು ತಂಡದಲ್ಲಿ ಖಾಯಂ ಕಲಾವಿದನಾಗಿ ತಂಡದ ‘ಶಿವಪುರ್ಸಾದ ಬಬ್ಬರ್ಯ” ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.

ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ತಂಡದ ಶಿವದೂತೆ ಗುಳಿಗೆ ಎಂಬ ಸೂಪರ್ ಹಿಟ್ ನಾಟಕದಲ್ಲಿ ‘ಶಿವ’ ಮತ್ತು ‘ಬಬ್ಬುಸ್ವಾಮಿ’ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ. ದೇವದಾಸ್ ಕಾಪಿಕಾಡ್ ನಿರ್ದೇಶನದ ಅಬತರ, ಹಾಗೂ ಪುರುಷೋತ್ತಮ ಪ್ರಸಂಗ ಚಿತ್ರಗಳು ತೆರೆಗೆರೇಲು ಸಿದ್ಧವಾಗಿವೆ. ಹೆಸರಾಂತ ನಿರ್ದೇಶಕ ಡಾ.ರಾಜೇಂದ್ರಸಿಂಗ್ ಬಾಬು ಇವರ ನಿರ್ದೇಶನದಲ್ಲಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಬರಲಿರುವ ಕಂಬಳ ಹಾಗೂ ತುಳುವಿನ ‘ಪಿಲಿ’ ಎಂಬ ಚಿತ್ರಗಳಿಗೆ ಚಿತ್ರೀಕರಣ ನಡೆಯುತ್ತಿದೆ.

ಇವರ ಕಲಾ ಸೇವೆಯು ಇನ್ನಷ್ಟು ಪಸರಿಸಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸೋಣ…

- Advertisement -

Related news

error: Content is protected !!