Sunday, July 26, 2026
spot_imgspot_img
spot_imgspot_img

ಕಾಪು: ವೃದ್ದೆಯ ಕೊಲೆ- ಇಬ್ಬರು ಬಂಧನ

- Advertisement -
- Advertisement -

ಕಾಪು: ಕ್ಷುಲ್ಲಕ ಕಾರಣಕ್ಕೆ ವೃದ್ದೆ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಾ.9ರಂದು ರಾತ್ರಿ ವೇಳೆ ನಡೆದಿದ್ದು, ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.

ಕೊಲೆಗೀಡಾದವರನ್ನು ಕೆನರಾಡಿಯ ವನಜಾಪೂಜಾರ್ತಿ(60) ಎಂದು ಗುರುತಿಸಲಾಗಿದ್ದು, ಬಂಧಿತರನ್ನು ಪ್ರವೀಣ್ ಮೆಂಡೊನ್ಸಾ ಮತ್ತು ವಲೇರಿಯನ್ ಮೆಂಡಾನ್ಸಾ ಎಂದು ಗುರುತಿಸಲಾಗಿದೆ. ತಮ್ಮ ನೆರೆಹೊರೆಯವರಲ್ಲಿ ಒಬ್ಬರಾದ ವನಜಾ ಪೂಜಾರ್ತಿ ಅವರೊಂದಿಗೆ ಮದ್ಯ ಸೇವಿಸುತ್ತಿದ್ದರು.

ಮಾ.10 ರ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಘಟನೆ ಬೆಳಕಿಗೆ ಬಂದಿದ್ದು, ಕ್ಷುಲ್ಲಕ ವಿಷಯಕ್ಕೆ ಜಗಳವಾಗಿ , ವಲೇರಿಯನ್ ಮತ್ತು ಪ್ರವೀಣ್, ವನಜಾ ಪೂಜಾರ್ತಿಯ ಮೇಲೆ ಹರಿತವಾದ ಆಯುಧದಿಂದ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಎಂಸಿಯ ವಿಧಿವಿಜ್ಞಾನ ತಂಡ, ಸೋಕೊ ತಂಡ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!