Thursday, July 30, 2026
spot_imgspot_img
spot_imgspot_img

ವಿಟ್ಲ: ಪೆರುವಾಯಿ ಸೇತುವೆ ಬಳಿ ಕೋಳಿ ಸಾಗಾಟದ ಪಿಕಪ್ ಪಲ್ಟಿ; ಸ್ಥಳೀಯರೆಲ್ಲರ ಮನೆಯಲ್ಲೂ ಚಿಕನ್ ಸ್ಪೆಷಲ್ ಐಟಂ

- Advertisement -
- Advertisement -

ವಿಟ್ಲ: ಪೆರುವಾಯಿಯಿಂದ ಬೆರಿಪ್ಪದವು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಶನಿವಾರ ಪೆರುವಾಯಿ ಸೇತುವೆ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ.

ಪೆರುವಾಯಿ ಸೇತುವೆ ಅತ್ಯಂತ ಕಿರಿದಾಗಿದ್ದು ಇದಕ್ಕೂ ಮೊದಲು ಇಳಿಜಾರು ಪ್ರದೇಶವಾದ್ದರಿಂದ ಪಿಕಪ್ ಗೆ ಬ್ರೇಕ್ ಸಮಸ್ಯೆಯಾಗಿ ಸೇತುವೆಯ ಮುಂದೆ ಅಡ್ಡಲಾಗಿ ಉರುಳಿ ಬಿದ್ದಿದೆ.

ಪಿಕಪ್ ಚಾಲಕನ ಕೈಗೆ ತೀವ್ರವಾಗಿ ಗಾಯವಾಗಿದ್ದು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಪಿಕಪ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಪಘಾತದಿಂದಾಗಿ ಪಿಕಪ್ ನಲ್ಲಿದ್ದ ಹೆಚ್ಚಿನ ಕೋಳಿಗಳು ಸತ್ತಿದ್ದು ಕೆಲವು ಕೋಳಿಗಳು ಸ್ಥಳೀಯರ ಪಾಲಾಗಿದೆ.

ಸ್ಥಳೀಯ ಎಲ್ಲರ ಮನೆಯಲ್ಲೂ ಚಿಕನ್ ಸ್ಪೆಷಲ್ ಮಾಡಿದ್ದಾರೆ. ಲಾಕ್‌ಡೌನ್ ಇರುವುದರಿಂದ ಮಾಂಸ ಖರೀದಿಗೂ ನಿಗದಿತ ಸಮಯ ಇದ್ದರಿಂದ ಹೆಚ್ಚಿನವರು ಅದರ ಉಸಾಬರಿಗೆ ಹೋಗುವುದಿಲ್ಲ. ಈ ಪಿಕಪ್‌ ಅಪಘಾತದಿಂದ ಹಲವು ಕೋಳಿಗಳು ಸತ್ತ ಪರಿಣಾಮ ಸ್ಥಳೀಯರಿಗೆ ಪುಕ್ಕಟೆಯಾಗಿ ಕೋಳಿ ಸಿಕ್ಕಿದೆ. ಪುಕ್ಕಟೆ ಪುಕ್ಕ ಉಳ್ಳ ಕೋಳಿ ಸಿಕ್ಕ ಮನೆಯ ಹೆಂಗಳೆಯರು ಕೋಳಿ ಖಾದ್ಯದ ಹೊಸ ಹೊಸ ರೆಸಿಪಿ ಟ್ರೈ ಮಾಡ್ತಿದ್ದಾರೆ ಎನ್ನುವುದು ಕೇಳಿ ಬರುತ್ತಿರುವ ಅಂತೆ ಕಂತೆ.

- Advertisement -

Related news

error: Content is protected !!