Wednesday, May 8, 2024
spot_imgspot_img
spot_imgspot_img

ನೆಟ್ಲ ಮುಡ್ನೂರು: ಮಕ್ಕಳ ಗ್ರಾಮ ಸಭೆ

- Advertisement -G L Acharya panikkar
- Advertisement -

ವಿಟ್ಲ: ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ 2020-21ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ನೇರಳಕಟ್ಟೆ ದ.ಕ.ಜಿ.ಪಂ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನೇರಳಕಟ್ಟೆ ಶಾಲಾ ವಿದ್ಯಾರ್ಥಿನಿ ಅನುಶ್ರೀ ಸಭೆಯ ಅದ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅನಂತಾಡಿ ಶಾಲಾ ಮುಖ್ಯ ಶಿಕ್ಷಕ ದೊಡ್ಡ ಕೆಂಪಯ್ಯ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ಭಾಗವಹಿಸುವ ಮನೋಭಾವ ಮೂಡಿಸುವ ಆಶಯ ಗ್ರಾಮಸಭೆ ಹೊಂದಿದೆ, ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಯುವ, ಸಂರಕ್ಷಿಸುವ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮಹತ್ವ ಪೂರ್ಣ ಕಾರ್ಯ ನಡೆಸಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಮೇಲ್ವಿಚಾರಕಿ ರೂಪಕಲಾ, ಆರೋಗ್ಯ ಇಲಾಖಾ ಸಹಾಯಕಿ ಪವಿತ್ರ, ಸಿ.ಆರ್.ಪಿ. ಸತೀಶ್ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ, ಉಪಾಧ್ಯಕ್ಷೆ ಶಕೀಲಾ ಕೆ. ಪೂಜಾರಿ, ಸದಸ್ಯರಾದ ಲತೀಫ್ ನೇರಳಕಟ್ಟೆ, ಅಶೋಕ ರೈ, ಧನಂಜಯ, ಪ್ರೇಮಾ, ಲಕ್ಷ್ಮೀ ಉಪಸ್ಥಿತರಿದ್ದರು.

ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ, ನೇರಳಕಟ್ಟೆ ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಸಹ ಶಿಕ್ಷಕ ಸುಧಾಕರ ಶೆಟ್ಟಿ, ಆಶಾ ಕಾರ್ಯಕರ್ತೆಯರಾದ ಮಮತಾ, ಪ್ರೇಮ, ಸುಮಲತಾ, ಗ್ರಾ.ಪಂ. ಸಿಬ್ಬಂದಿಗಳಾದ ಶಶಿಧರ, ಉಪೇಂದ್ರ ಮೊದಲಾದವರು ಭಾಗವಹಿಸಿದ್ದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಜಿತ್ ಕುಮಾರ್ ಸ್ವಾಗತಿಸಿ, ವಂದಿಸಿದರು.

- Advertisement -

Related news

error: Content is protected !!