Sunday, May 5, 2024
spot_imgspot_img
spot_imgspot_img

ಬ್ರಿಕ್ಸ್ ಆಯೋಜಿಸಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 13 ನೇ ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆ ಪ್ರಾರಂಭವಾಗಿದೆ. ಭಯೋತ್ಪಾದನೆ, ಆರ್ಥಿಕ ಬಿಕ್ಕಟ್ಟು, ಡಿಜಿಟಲ್ ಮತ್ತು ತಂತ್ರಜ್ಞಾನ ಬಳಕೆ ಕುರಿತು ಚರ್ಚೆ ನಡೆಸಲಾಗುತ್ತಿದೆ.

ವರ್ಚುವಲ್ ಶೃಂಗಸಭೆಯಲ್ಲಿ 10 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಚೀನಾ ಅದ್ಯಕ್ಷ ಶಿ ಜಿನ್​ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿಯಾಗಿದ್ದಾರೆ.

ಶೃಂಗಸಭಯೆನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.. ಭಾರತ ತನ್ನ ಅಧ್ಯಕ್ಷತೆಯ ಅವಧಿಗೆ ನಿರಂತರತೆ, ಬಲವರ್ಧನೆ, ಮತ್ತು ಒಮ್ಮತಕ್ಕಾಗಿ ಥೀಮ್​ನ್ನು ಆಯ್ಕೆ ಮಾಡಿಕೊಂಡಿದೆ. ಇವು ನಮ್ಮ ಬ್ರಿಕ್ಸ್ ಪಾಲುದಾರಿಕೆಯ ಮೂಲ ತತ್ವಗಳಾಗಿವೆ.

ಕಳೆದ 1.5 ದಶಕಗಳಲ್ಲಿ ಬ್ರಿಕ್ಸ್ ಬಹಳಷ್ಟು ಸಾಧಿಸಿದೆ. ಇಂದು ನಾವು ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆಗೆ ಪರಿಣಾಮಕಾರಿ ಧ್ವನಿಯಾಗಿದ್ದೇವೆ. ನಮ್ಮ ವೇದಿಕೆ ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯತೆಗಳಿಗೆ ಗಮನ ಸೆಳೆಯಲು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಭಾರತವು ಎಲ್ಲ ಸದಸ್ಯರಿಂದ ಸಂಪೂರ್ಣ ಸಹಕಾರವನ್ನು ಪಡೆದುಕೊಂಡಿದೆ. ನಾವು ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ. ಇನ್ನು ಬ್ರಿಕ್ಸ್ ಆಯೋಜಿಸಿದ್ದಕ್ಕೆ ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಧನ್ಯವಾದ ಹೇಳಿದ್ದಾರೆ.

- Advertisement -

Related news

error: Content is protected !!