- Advertisement -
- Advertisement -
ಕಂಬಳಬೆಟ್ಟು: ಬಾಲಕಿಯೋರ್ವಳ ಚಿಕಿತ್ಸಾ ವೆಚ್ಚಕ್ಕಾಗಿ ಚುಕ್ಕಿ ವಿಟ್ಲ ಹಾಗೂ ರವಿ ಪೂಜಾರಿ ಬೆಳ್ಳಾರೆ, ನಾಗೇಶ್ ಅವರ ಮಾರ್ಗದರ್ಶನದಲ್ಲಿ ವೇಷ ಧರಿಸಿ ಹಣ ಸಂಗ್ರಹಣೆ ಮಾಡಿದ್ದಾರೆ.
ವಿಟ್ಲ ಮಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಕಂಬಳ ಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿನಿ 14 ವರ್ಷದ ಬಾಲಕಿಯ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಸಹಾಯವಾಗುವ ಉದ್ದೇಶದಿಂದ ಶ್ರೀ ವಿಷ್ಟು ಯುವಶಕ್ತಿ ಬಳಗ (ರಿ) ಮಜ್ಜಾರಡ್ಕ ವತಿಯಿಂದ ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಚುಕ್ಕಿ ವಿಟ್ಲ , ರವಿ ಬೆಳ್ಳಾರೆ ಹಾಗೂ ನಾಗೇಶ್ ಬೆಳ್ಳಾರೆ ವಿಶೇಷ ವೇಷ ಧರಿಸಿ ಸಹಾಯ ಹಸ್ತಕ್ಕಾಗಿ ಡಬ್ಬ ಹಿಡಿದು ಹಣ ಸಂಗ್ರಹಣೆ ಮಾಡಿ ಅದರಲ್ಲಿ ಬಂದ ಮೊತ್ತವನ್ನು ನರದ ತೊಂದರೆಯಿಂದ ಬಳಲುತ್ತಿದ್ದ ವರ್ಷಿನಿ ಅವರಿಗೆ ನಾಗೇಶ್ ಬೆಳ್ಳಾರೆ ಮತ್ತು ಚುಕ್ಕಿ ವಿಟ್ಲ ಚೆಕ್ ನ್ನು ಹಸ್ತಾಂತರಿಸಿದ್ದಾರೆ.
- Advertisement -