Wednesday, April 24, 2024
spot_imgspot_img
spot_imgspot_img

*ಜಿಲ್ಲಾ ಅಪರಾಧ ಗುಪ್ತ ವಾರ್ತ ವಿಭಾಗದ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಉದಯ ರೈ ಮಂದಾರ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ*

- Advertisement -G L Acharya panikkar
- Advertisement -

ಪುತ್ತೂರು: ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಂಬ್ರದ ಉದಯ ರೈ ಮಂದಾರರವರು 2017 ನೇ ಸಾಲಿನ ಮುಖ್ಯ ಮಂತ್ರಿಯವರ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.

ದಿ.ನಾರಾಯಣ ರೈ ಮತ್ತು ಲಲಿತಾ ರೈಯವರ ಪುತ್ರರಾಗಿರುವ ಇವರು ಸಿನಿಮಾ ನಟ, ನಿರ್ದೇಶಕ ಸುಂದರ ರೈ ಮಂದಾರರವರ ಸಹೋದರರಾಗಿದ್ದಾರೆ. ಉದಯ ರೈಯವರು 2000 ಜೂನ್ 16ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಆರಕ್ಷಕರಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಪ್ರಥಮವಾಗಿ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ.

ಬಳಿಕ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ (ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗ )ಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರು ಸೇವೆಗೆ ಸೇರಿದಂದಿನಿಂದ ವಿಶೇಷವಾಗಿ ಅಪರಾಧ ಪತ್ತೆ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿರುತ್ತಾರೆ. ಹಾಗೂ ಆನೇಕ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಆನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಇವರ ಚಾಣಾಕ್ಷತನದಲ್ಲಿ ಅನೇಕ ಘೋರ ಅಪರಾಧಗಳು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ಪತ್ತೆಯಾಗಿರುತ್ತದೆ. 2009ರಲ್ಲಿ ಅಮಯಕ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಗುತ್ತೇನೆಂದು ನಂಬಿಸಿ ಸೈನೆಡ್ ನೀಡಿ ಸೀರಿಯಲ್ ಕೊಲೆಗಳನ್ನು ಮಡಿದ ಕುಖ್ಯಾತ ಮೋಹನ್ ಕುಮಾರ್‌ರವರನ್ನು ಬಂಧಿಸಿ 20 ಕೊಲೆ ಪ್ರಕರಣಗಳನ್ನು ಭೇಧಿಸುವಲ್ಲಿ ಹಾಗೂ ಈ ಪ್ರಕರಣದ ತನಿಖೆಗೆ ತನಿಖಾಧಿಕಾರಿಯವರ ಜೊತೆಯಲ್ಲಿ ಸಹಕರಿಸಿರುತ್ತಾರೆ.

2012 ರಲ್ಲಿ ಪುಂಜಾಲಕಟ್ಠ ಠಾಣಾ ಸರಹದ್ದಿನ ಬಾರ್ಯ ಎಂಬಲ್ಲಿನ ಮುಸ್ಲಿಂ ಮಹಿಳೆ ಖತೀಜಮ್ಮ ಕೊಲೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. 2013 ರಲ್ಲಿ ಬೆಳ್ತಂಗಡಿ ಠಾಣಾ ಸರಹದ್ದಿನ ಬಂಗಾಡಿ ಜೈನ ಬಸದಿಯಿಂದ ಕಳವಾದ ೬ ತೀಥಂಕರ ವಿಗ್ರಹವನ್ನು ಹಾಗೂ ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕಳವಾದ ಚಿನ್ನ ಬೆಳ್ಳಿಯ ಆಭರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. 2016ರಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಸರಹದ್ದಿನ ಇಸ್ಮಾಯಿಲ್ ಬೆಳ್ಳಾರೆ ಕೊಲೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ.

೨೦೧೬ ರಲ್ಲಿ ಧರ್ಮಸ್ಥಳ ಪೊಲೀಸು ಠಾಣಾ ಸರಹದ್ದಿನ ಕಕ್ಕಿಂಜೆ ವೃದ್ದ ದಂಪತಿ ಗಳ ಮನೆ ದರೋಡೆ ಮಾಡಿ ದಂಪತಿಗಳ ಕೊಲೆ ಮಾಡಿದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಸುಳ್ಯ ಪೊಲೀಸ್ ಠಾಣಾ ಅ.ಕ್ರ ೬೬/೧೧ ಕಲಂ: 302 ಜೊತೆಗೆ ೩೪ ಐಪಿಸಿ .ಪ್ರಕರಣ. ಕೆವಿಜಿ ಪ್ರಾಂಶುಪಾಲ ರಾಮಕೃ? ಭಟ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾ ೪೭/೧೮ ಕಲಂ ೩೦೨ ಐಪಿಸಿ .ಪ್ರಕರಣದ ಪಂಬೆತ್ತಾಡಿ ಸುಬ್ರಹ್ಮಣ್ಯ ಭಟ್ ಕೊಲೆ ಆರೋಪಿಗಳ ಪತ್ತೆ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!