Friday, April 26, 2024
spot_imgspot_img
spot_imgspot_img

ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ

- Advertisement -G L Acharya panikkar
- Advertisement -

ಬೆಂಗಳೂರು: ಮೊನ್ನೆಯಿಂದ ಪದವಿ ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟಿವೆ.2019-20ನೇ ಸಾಲಿನಲ್ಲಿ ವಿತರಿಸಲಾಗಿರುವ ಕೆಎಸ್​ಆರ್​​ಟಿಸಿ ಬಸ್‌ ಪಾಸ್‌ನಲ್ಲೇ ವಿದ್ಯಾರ್ಥಿಗಳು ಮುಂದಿನ ತಿಂಗಳವರೆಗೆ ಸಂಚಾರ ಮಾಡುವ ಅವಕಾಶ ನೀಡಲಾಗಿದೆ. ಡಿಸೆಂಬರ್​ 10ರವರೆಗೆ 2019-20ನೇ ಸಾಲಿನ ಕೆಎಸ್​​ಆರ್​​ಟಿಸಿ ಬಸ್ ಪಾಸ್ ಮಾನ್ಯವಿರಲಿದೆ.

ಪದವಿ, ಸ್ನಾತಕೋತ್ತರ, ಡಿಪ್ಲೋಮೋ, ತಾಂತ್ರಿಕ, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ಪಡೆದ ಕೆಎಸ್​ಆರ್​ಟಿಸಿ ಪಾಸ್​ ತೋರಿಸಿ ಸಂಚಾರ ಮಾಡಬಹುದಾಗಿದೆ. ಆದ್ರೆ ಇದಕ್ಕೆ ಸದ್ಯದ ಕಾಲೇಜು ಫೀಸ್ ಕಟ್ಟಿದ ರಶೀದಿ, 2019-20ನೇ ಸಾಲಿನ ಬಸ್ ಪಾಸ್ ಹೊಂದಿರುವುದು ಕಡ್ಡಾಯ. ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ಈ ಅವಕಾಶವನ್ನ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಆನ್​ಲೈನ್​ ಮೂಲಕ ಬಿಎಂಟಿಸಿ ಬಸ್​ ಪಾಸ್​ ವಿತರಣೆ


ಬಿಎಂಟಿಸಿ ಬಸ್​​ ಪಾಸ್​​​ಗಳನ್ನ ಆನ್​ಲೈನ್ ಮೂಲಕವೂ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಸ್ಮಾರ್ಟ್ ಕಾರ್ಡ್ ನೀಡೋಕೆ ನಿರ್ಧಾರ ಮಾಡಲಾಗಿದೆ. ಬಿಎಂಟಿಸಿಯ ಅಧಿಕೃತ ವೆಬ್​​ಸೈಟ್​​ನಲ್ಲಿ ಪಾಸ್​​ಗಳಿಗೆ ಅರ್ಜಿ ಸಲ್ಲಿಸಬಹುದು.

- Advertisement -

Related news

error: Content is protected !!