Wednesday, August 5, 2026
spot_imgspot_img
spot_imgspot_img

ಏಕಾಏಕಿ ಭೀಕರ ಭೂಕುಸಿತ..! ಬಸ್ಸು ಮಣ್ಣಿನಡಿಯಲ್ಲಿ ಹೂತು 33 ಮಂದಿ ಮೃತ್ಯು

- Advertisement -
- Advertisement -

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ 33 ಮಂದಿ ದಾರುಣವಾಗಿ ಅಸುನೀಗಿದ ಘಟನೆ ನಡೆದಿದೆ. ಕೊಲಂಬಿಯಾದ ವಾಯುವ್ಯ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ.

ಕೊಲಂಬಿಯಾದ ರಾಜಧಾನಿ ಬೊಗೋಟಾದಿಂದ ಸುಮಾರು 230 ಕಿಮೀ ದೂರದಲ್ಲಿರುವ ರಿಸಾರಾಲ್ಡಾ ಪ್ರಾಂತ್ಯದ ಪ್ಯೂಬ್ಲೋ ರಿಕೊ ಮತ್ತು ಸಾಂಟಾ ಸಿಸಿಲಿಯಾ ಗ್ರಾಮಗಳ ನಡುವೆ ಭೂಕುಸಿತ ಉಂಟಾಗಿದೆ. ವರದಿ ಪ್ರಕಾರ ಬಸ್‌ವೊಂದರಲ್ಲಿ 25 ಮಂದಿ ಪ್ರಯಣಿಸುತ್ತಿದ್ದರು. ಇದರ ಹಿಂದೆಯೂ ಕೆಲ ವಾಹನಗಳ ಸಂಚಾರಿಸುತ್ತಿದ್ದವು ಏಕಾಏಕಿ ಭೂಕುಸಿತ ಉಂಟಾದ ಪರಿಣಾಮ ಬಸ್‌ ಮಣ್ಣಿನಡಿಯಲ್ಲಿ ಹೂತು ಹೋಗಿದ್ದು, ಸುಮಾರು 33 ಮಂದಿ ಸಾವಿಗೀಡಾಗಿದ್ದಾರೆ.

ಬಸ್ಸಿನಲ್ಲಿದ್ದವರಲ್ಲಿ ಐವರನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಮಣ್ಣಿನಡಿ ಸಿಲುಕಿದವರನ್ನು ಹೊರ ತೆಗೆಯುವ ಕಾರ್ಯಚರಣೆ ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!