Monday, May 6, 2024
spot_imgspot_img
spot_imgspot_img

ಅರುಣ್ ಪುತ್ತಿಲ ಬಿಜೆಪಿಯ ತಾರಾ ಪ್ರಚಾರಕರ ಪೋಟೋ ಬಳಕೆ; ಯೋಗಿಗೆ ಸ್ವಾಗತ ಕೋರದಂತೆ ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು

- Advertisement -G L Acharya panikkar
- Advertisement -
vtv vitla

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪೋಟೋ ಬಳಕೆ ಮಾಡಿ ಅವರಿಗೆ ಸ್ವಾಗತ ಕೋರುವುದು ತಡೆಯಲು ಬಿಜೆಪಿ ಮೂರನೇ ದೂರು ನೀಡಿದೆ.

ಪಕ್ಷೇತರ ಅಭ್ಯರ್ಥಿ ಪುತ್ತಿಲ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅರುಣ್ ಪುತ್ತಿಲ ಬಿಜೆಪಿಯ ತಾರಾ ಪ್ರಚಾರಕನ್ನು ಪೋಟೋ ಬಳಸಿಕೊಳ್ಳುತಿದ್ದಾರೆ. ನಾಳಿನ ಪತ್ರಿಕೆಗೆ ಪುತ್ತೂರಿಗೆ ಆಗಮಿಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಸ್ವಾಗತ ಕೋರಿ ಜಾಹಿರಾತು ಹಾಕುವ ಬಗ್ಗೆ ನಮ್ಮಗಮನಕ್ಕೆ ಬಂದಿದೆ. ಯಾವುದೇ ಪತ್ರಿಕೆಗೆ ಅರುಣ್ ಪುತ್ತಿಲ ಹಾಗೂ ಅಭಿಮಾನಿಗಳು ಜಾಹಿರಾತು ನೀಡದಂತೆ ಪತ್ರಿಕೆಗಳಿಗೆ ನೋಟಿಸ್‌ ನೀಡುವಂತೆ ತಾಲೂಕು ಚುನಾವಣ ಅಧಿಕಾರಿಗೆ ದೂರು ನೀಡಲಾಗಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕರ್ನಾಟಕ ವಿಧಾನ ಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿಯಿಂದ ಆಶಾ ತಿಮ್ಮಪ್ಪ ಗೌಡರವರು ಸ್ಪರ್ಧಿಸುತ್ತಿದ್ದಾರೆ. ಕ್ರಮ ಸಂಖ್ಯೆ 7 ರಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರಿಗೆ “ಬ್ಯಾಟ್” ಚಿಹ್ನೆಯನ್ನು ನೀಡಲಾಗಿದೆ. ಆದರೆ ಪಕ್ಷೇತರ ಅಭ್ಯರ್ಥಿಯಾದ ಅರುಣ್ ಕುಮಾರ್ ಪುತ್ತಿಲರವರು ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ನೇತಾರರ ಭಾವ ಚಿತ್ರಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ಬಂದಿರುವ ಚಿತ್ರಗಳ ದಾಖಲೆಯನ್ನು ದೂರಿನೊಂದಿಗೆ ಲಗತ್ತಿಸಿದ್ದಾರೆ.

ಜನತಾ ಪಾರ್ಟಿಯ ನಾಯಕರ ಫೋಟೋಗಳನ್ನು ಪ್ರಚಾರದಲ್ಲಿ ಉಪಯೋಗಿಸುವಂತಿಲ್ಲದಿದ್ದರೂ, ಭಾರತೀಯ ಜನತಾ ಪಾರ್ಟಿಯ ನಾಯಕರ ಭಾವಚಿತ್ರಗಳನ್ನು ಬಳಸುತ್ತಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಭಾವಚಿತ್ರಗಳ ಸ್ಕ್ರೀನ್ ಶಾಟ್‌ಗಳ ಪ್ರಿಂಟ್‌ಗಳನ್ನು ಇದರೊಂದಿಗೆ ಲಗ್ತೀಕರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಶೀಲನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದಾರೆ.

- Advertisement -

Related news

error: Content is protected !!