“ಪುಗರ್ತೆ” ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸಿರುವ “ಕಲ್ಚಿಗದ ಕಾಳಿ ಮಂತ್ರದೇವತೆ” ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನ



ವಿಟ್ಲ: ಮುಡ್ನೂರು, ಬಂಟ್ವಾಳ ತಾಲೂಕು ಶಿಬರಿ ಯುವಕ ಮಂಡಲ (ರಿ.) ಮಾಡತ್ತಡ್ಕ ಇವರ ಆಶ್ರಯದಲ್ಲಿ
ಶ್ರೀ ಮಲರಾಯಿ, ಶ್ರೀ ಮೂವರ್ ದೈವಂಗಳ ನೇಮೋತ್ಸವದ ಪ್ರಯುಕ್ತ 28ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾಕಾರ್ಯಕ್ರಮಗಳು ಮಾ. 4 ಬುಧವಾರದಂದು ನಡೆಯಲಿದೆ.
ಸಂಜೆ ಗಂಟೆ 5:30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಗಂಟೆ 6:30ಕ್ಕೆ ಶಿಬರಿ ಯುವಕ ಮಂಡಲ ಭಜನಾ ತಂಡದಿಂದ ಕುಣಿತ ಭಜನೆ ” ನಡೆಯಲಿದೆ. 7:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 8:30ಕ್ಕೆ ಸ್ಥಳೀಯ ಮಕ್ಕಳಿಂದ ವಿವಿಧ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 9ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 10:00ರಿಂದ, ನಿತಿನ್ ಹೊಸಂಗಡಿ ಇವರ ನಿರ್ದೇಶನದಲ್ಲಿ, “ಪುಗರ್ತೆ” ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸಿರುವ ಕಲ್ಚಿಗದ ಕಾಳಿ ಮಂತ್ರದೇವತೆ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೀಕ್ಷಿತ್ ಬಿ.ಹೆಚ್ ಅಧ್ಯಕ್ಷರು, ಶಿಬರಿ ಯುವಕ ಮಂಡಲ ಮಾಡತ್ತಡ್ಕ , ಉಪಸ್ಥಿತಿ ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಗೌರವ ಉಪಸ್ಥಿತಿ ಡಾ|ಪ್ರಭಾಕರ್ ವೈಸ್ ಪ್ರಿನ್ಸಿಪಾಲ್ ಆಂಡ್ ಪ್ರೊಫೆಸರ್ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೂಡಬಿದ್ರಿ, ಧಾರ್ಮಿಕ ಉಪನ್ಯಾಸ ಶ್ರೀಮತಿ ಜಯಶ್ರೀ ಜಿ, ಶಿಕ್ಷಕಿ, ಕವಿ ,ಸಾಹಿತಿ, ವಿಮರ್ಶಕರು, ವಿಟ್ಲ ಅರಮನೆ, ಮುಖ್ಯ ಅತಿಥಿಗಳಾಗಿ ಆನಂದ ಕೆ.ಟಿ ಅದ್ಯಕ್ಷರು ಯುವವಾಹಿನಿ ವಿಟ್ಲ ಘಟಕ, ಪುನೀತ್ ಮಾಡತ್ತಾರ್ ಅದ್ಯಕ್ಷರು, ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್, ಶ್ರೀಮತಿ ಜಯಶ್ರೀ ಜಿ ಶಿಕ್ಷಕಿ ವಿಠ್ಠಲ್ ಜೇಸಿಸ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ, ಶ್ರೀಮತಿ ಕಾವ್ಯ ದಿವ್ಯಪ್ರಸಾದ್ ಬಿ.ಹೆಚ್ ಪೋಲಿಸ್ ಇಲಾಖೆ ಐ.ಜಿ.ಪಿ ಆಫೀಸ್ ಪಾಂಡೇಶ್ವರ ಮಂಗಳೂರು.








