ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು,1694 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19710 ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಂದು ಬರೋಬ್ಬರಿ 21ಮಂದಿ ಸಾವನ್ನಪ್ಪಿದ್ದಾರೆ.ಕೊರೊನಾ ಮಹಾಮಾರಿಯ ಆರ್ಭಟಕ್ಕೆ
ಇಂದು ರಾಜಧಾನಿಯಲ್ಲಿ 994 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 7173 ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಇದುವರೆಗೆ ಬೆಂಗಳೂರಲ್ಲಿ ಕೊರೊನಾ ಮಹಾಮಾರಿ 105 ಮಂದಿ ಬಲಿಯಾಗಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಮಹಾಮಾರಿ ಒಂದೇ ದಿನದಲ್ಲಿ ಶತಕಕ್ಕೆ ಸಮೀಪಿಸಿದೆ. ಬರೋಬ್ಬರಿ 97 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.ಉಳ್ಳಾಲದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಂಡಂ ಟೆಸ್ಟ್ ಮಾಡಲಾಗುತ್ತಿದ್ದು ಅದರಲ್ಲಿ ಇಂದು ಮತ್ತೆ 28 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಾಥಮಿಕ ಸಂಪರ್ಕದಿಂದ 25 ಜನರಿಗೆ ಸೋಂಕು ,ILI 28, ಸಂಪರ್ಕವೇ ಪತ್ತೆಯಾಗದ 13 ಕೇಸ್ ಪತ್ತೆ ,ಹಾಗೂ
ಅಂತರಾಷ್ಟ್ರೀಯ ಪ್ರಯಾಣದಿಂದ 3 ಜನರಿಗೆ ಸೋಂಕು ಪತ್ತೆ ಯಾಗಿದೆ.ಇಂದು ಕೂಡ ಜಿಲ್ಲೆಯಲ್ಲಿ ಮಾರಕ ಕೊರೋನಾಗೆ ಒಂದು ಬಲಿಯಾಗಿದೆ.49 ವರ್ಷದ ಗಂಡಸು
ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವುಗಿಡಾಗಿದೆ.ದ.ಕ ಜಿಲ್ಲೆಯಲ್ಲಿ ಕೊರೋನಾಗೆ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ.