Thursday, April 25, 2024
spot_imgspot_img
spot_imgspot_img

ಕೊವಿಡ್ 19 ಮತ್ತು ಆಯುರ್ವೇದ

- Advertisement -G L Acharya panikkar
- Advertisement -

ಆದರ್ಶ ಪರಕ್ಕಜೆ
ಆಯುರ್ವೇದ ವಿದ್ಯಾರ್ಥಿ

ಕೊರೊನಾಕ್ಕೆ ಯಾವುದೇ ಔಷಧ ಇಲ್ಲವಾದರೂ ಹೇಗೆ ಸದ್ಯ ಚಿಕಿತ್ಸೆ ಸಿಗುತ್ತಿದೆ , Standard Treatment ಗಳೇನು,ಹೇಗೆ ಹರಡುತ್ತದೆ,ಕೊರೊನಾದ ಲಕ್ಷಣಗಳೇನು,ಕೊರೊನಾ ತಡೆಗಟ್ಟಲು ಏನು ಮಾಡಬಹುದು ಎಂದೆಲ್ಲಾ ಜನರಿಗೆ ಚೆನ್ನಾಗಿಯೇ‌ ತಿಳಿದಿದೆ.ಚಿಕಿತ್ಸೆಯೂ ಇಲ್ಲದೆ ಗುಣಮುಖರಾದ್ದನ್ನು ನೋಡಿದ್ದೇವೆ, ಚಿಕಿತ್ಸೆ ಪಡೆದೂ ಸಹ ಯಶಸ್ವಿಯಾಗದೆ ಮೃತ ಪಟ್ಟವರನ್ನೂ ನೋಡಿದ್ದೇವೆ.ಇನ್ನು ಕೊರೊನಾ ವಿರುದ್ಧ ಹೋರಾಡಲು ನಮ್ಮ ಆಯುರ್ವೇದವೂ ಕೂಡ ಪ್ರಯತ್ನ ಪಡುತ್ತಿದೆ ಹಾಗೂ ಇಷ್ಟರ ವರೆಗೆ ಯಶಸ್ವಿಯಾಗಿದೆ ಕೂಡ.
ಇನ್ನು ಮೊದಲಿಗೆ ಬಾಬಾ ರಾಮ್ ದೇವ್ ಕೊರೊನಾಕ್ಕೆ ಔಷಧಿ ಕಂಡು ಹಿಡಿದಿರುವುದಾಗಿ ಘೋಷಿಸಿ ನಂತರ ವಿವಾದ ಆದ್ದೂ ಗೊತ್ತೇ ಇದೆ.ಕೊನೆಗೆ ಅದು ಕೊರೊನಾ ಔಷಧವಲ್ಲ , ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಎಂದು ಆಯುಷ್ ಇಲಾಖೆ ಒಪ್ಪಿತು.ನಂತರ ನಮ್ಮ ಕನ್ನಡಿಗರಾದ ಡಾ.ಗಿರಿಧರ್ ಕಜೆಯವರು ತಮ್ಮ ಔಷಧಿಗಳು ಕೊರೊನಾದಲ್ಲಿ ಉಪಯುಕ್ತವಾಗುವ ವಿಶ್ವಾಸ ವ್ಯಕ್ತಪಡಿಸಿ, ಸರ್ಕಾರಕ್ಕೆ ತಮ್ಮ ಔಷಧಿಗಳನ್ನು Clinical Trial ಗೆ ಒಳಪಡಿಸುವಂತೆ ಕೋರಿದರು.

2 ತಿಂಗಳ ಬಳಿಕ ಅನುಮತಿ ದೊರಕಿ ತಮಗೆ ಸಿಕ್ಕಿದ ಅವಕಾಶದಲ್ಲಿ ಯಶಸ್ವಿಯಾದರು.ಆದರೆ ಇದನ್ನು ಮುಂದಿನ ಹಂತದ Trial ಗೆ‌ ಒಳಪಡಿಸಲು, ಇದನ್ನು ಔಷಧಿ ಎಂದು ಒಪ್ಪಲು ಬಹಳಷ್ಟು ವಿಳಂಬವಾಗುತ್ತಿದೆ.ಡಾ.ಕಜೆಯವರು ಕರ್ನಾಟಕದ ಪ್ರಸಿದ್ಧ ಆಯುರ್ವೇದ ವೈದ್ಯರು. ಆದ ಕಾರಣ ಅವರ ಔಷಧಿ ಮಾಧ್ಯಮಗಳಲ್ಲಿ ಹೆಚ್ಚು ‌ಸುದ್ದಿ ಮಾಡಿತು.ಕಜೆಯವರು Trial ಗಳು ಒಂದು ಕಡೆ ನಡೆಯಲಿ,ಆದರೆ ಇದು ಮೊದಲೇ ಬಳಸುತ್ತಿದ್ದ ಔಷಧಿಗಳಾಗಿದ್ದರಿಂದ ಇದನ್ನು ರೋಗ ನಿರೋಧಕ ಶಕ್ತಿ ವರ್ಧಿಸುವ ಔಷಧಿಗಳಾಗಿ ಬಳಸಲು ಪರವಾನಗಿ ಇರುವುದರಿಂದ ಇದನ್ನು Primary ಹಾಗು Secondary Contact ವ್ಯಕ್ತಿಗಳಿಗೆ ಸರ್ಕಾರವೇ‌ ನೀಡಲಿ , ಈ ಮೂಲಕ ಕೊರೊನಾ ನಿಯಂತ್ರಿಸಿ ಎಂದು ವಿನಂತಿಸಿದರು.ಇದೆಲ್ಲಾ ಪ್ರಚಾರಕ್ಕೆ, ಲಾಭಕ್ಕಾಗಿ ಮಾಡುವುತ್ತಿರುವುದಾಗಿ ಕೆಲವರು ಮೊಂಡು ವಾದ ಮಾಡುತ್ತಿದ್ದಾರೆ. ಹಾಗಾದರೆ ಈಗ ವ್ಯಾಕ್ಸಿನ್ ಮೊದಲು ಉತ್ಪಾದನೆ ಮಾಡಿದ Company ಗೆ ಎಷ್ಟು ಲಾಭ ಮಾಡಬಹುದು ಊಹಿಸಿ.ಪತಂಜಲಿ ಸಂಸ್ಥೆ 500 ರೂಪಾಯಿಗೆ ಔಷಧಿ ನೀಡುತ್ತೇವೆ ಎಂದಾಗ ಇದು Business ಎಂದರು.ಕಜೆಯವರು ಉಚಿತವಾಗಿ ನೀಡಲು ಸಿದ್ಧರಾದಾಗ ಇದು ಪ್ರಚಾರಕ್ಕೆ, ಭವಿಷ್ಯದ ಲಾಭಕ್ಕಾಗಿ ಎಂದರು. ಈಗ ನೀಡುತ್ತಿರುವ Standard treatment ಗೆ ಎಷ್ಟು ಖರ್ಚಾಗುತ್ತದೆ ಎಂದು ಎಲ್ಲರಿಗೂ ಗೊತ್ತು.ಇದನ್ನು ಸುಲಿಗೆ, ದಂಧೆ ಎನ್ನಬೇಕೇ???


ಆಯುರ್ವೇದ ಔಷಧಿಗಳನ್ನು ಕಣ್ಣುಮುಚ್ಚಿ ಒಪ್ಪಿ ಎಂದು ಯಾರೂ ಕೇಳಿಕೊಳ್ಳುತ್ತಿಲ್ಲ. ಅಲೋಪತಿ ಹಾಗು ಅಲೋಪತಿ ವೈದ್ಯರ ಬಗ್ಗೆ ಎಲ್ಲರಿಗೂ ಗೌರವವಿದೆ.ಅದೇ ಗೌರವ ಇತರ ಪದ್ಧತಿಗಳ ಮೇಲಿರಲಿ.ಆಯುಷ್ ವೈದ್ಯರ ಬಗ್ಗೆ ತಾತ್ಸಾರ ಬೇಡ.ಆಯುರ್ವೇದ ಕ್ಕೆ, ಆಯುರ್ವೇದ ವೈದ್ಯರಿಗೆ ಗೌರವ ಕೊಡಿ.ಆಯುರ್ವೇದಕ್ಕೆ ಸೂಕ್ತ ಸ್ಥಾನಮಾನ ನೀಡಿ.ಮನ್ನಣೆ ಕೊಡಿ. ಅಲೋಪತಿ ಗೂ ಸಮಾನ ಸ್ಥಾನಮಾನ ಇದೆಯೇ‌?? ಈ ದೇಶದಲ್ಲಿ ‌. ಕಜೆ ಅವರು Protocol Follow ಮಾಡಿಲ್ಲ ಎನ್ನುತ್ತೀರಲ್ಲಾ ? ಸರ್ಕಾರ ಯಾಕೆ ಅನುಮತಿ ನೀಡಿತು ಸ್ವಾಮಿ?? ಸಚಿವರು, ಗಣ್ಯರು ಹಾಗಾದರೆ ಯಾವ ಧೈರ್ಯದಲ್ಲಿ ಅವರ ಔಷಧಿ ಪಡೆದುಕೊಂಡರು ? ಆಯುರ್ವೇದ ವೈದ್ಯ ರಿಗೆ ನೆರವಾಗದಿದ್ದರೆ, ಆಯುರ್ವೇದದ ಶಕ್ತಿಯನ್ನು ಜಗತ್ತಿಗೆ ಪ್ರಸ್ತುತಪಡಿಸಲು ವಿಫಲವಾದರೆ ಅದೆಂತಹ Protocol ಸ್ವಾಮಿ? ಪ್ರತಿ ಒಬ್ಬ ಆಯುರ್ವೇದ ವೈದ್ಯ ನಿಗೂ ಕೊರೊನಾಕ್ಕೆ ಚಿಕಿತ್ಸೆ ನೀಡುವ ತಾಕತ್ತಿದೆ ಖಂಡಿತ.ಕಜೆ ಇಂದಲೇ ಆಗಬೇಕೆಂದಿಲ್ಲ..ಆದರೆ ಅವರು ಮುಂದೆ ಬಂದರು ಅಷ್ಟೇ.

ಅವಕಾಶವೇ ಇಲ್ಲ,ಸಿಕ್ಕ ಅವಕಾಶವನ್ನು ಸಾಧಿಸಿ ತೋರಿಸಿದರೂ ನೀವು ಅವಮಾನ ಮಾಡುತ್ತಿದ್ದೀರಿ.ತಾಳ್ಮೆ ಇರಲಿ , ಅವರ ಸಂಶೋಧನೆ ವಿಫಲ ಆದರೆ ಆಗ ಸಂಭ್ರಮ ಆಚರಣೆ ಮಾಡಿ. ಹಾಗು ಈಗ ನಿಮ್ಮ ವ್ಯಾಕ್ಸಿನ್ಗಳ Trial ಗಳಿಗೆ ಯಾರಾದರೂ ಅಡ್ಡಗಾಲು ಹಾಕಿದರೆ?? ಅದೇ ಆಯುರ್ವೇದ ಕ್ಕೆ ಬಂದಾಗ ಯಾಕೆ ಹೀಗೆ? ಅದು ಓರ್ವ ಖ್ಯಾತ ವೈದ್ಯರು ಮುಂದೆ ಬಂದಾಗ ಯಾಕೆ ಹೀಗೆ?? ಅವರಲ್ಲಿ , ಅವರ Trial ನಲ್ಲಿ ಲೋಪದೋಷ ಹುಡುಕುತ್ತೀರಲ್ಲಾ?? ನಿಮ್ಮ So Called Standard Approach ಎಷ್ಟು ಯಶಸ್ವಿಯಾಗಿದೆ ಸ್ವಾಮಿ? ನಿಮ್ಮ Theory ಗಳು , ಒಮ್ಮೆ ಏನನ್ನೋ ಸಾಧಿಸುತ್ತೀರಿ ನಂತರ ಅದನ್ನೇ Disprove ಮಾಡ್ತೀರಿ.ಜನ ಆಧುನಿಕ ವೈದ್ಯಕೀಯ ವಿಜ್ಞಾನ ಏನು ಹೇಳುತ್ತದೆ ಅದನ್ನೇ ಪರಮಸತ್ಯ‌ ಎಂದು ನಂಬ ಬೇಕು ಅಲ್ಲವೇ?? ಅದೆಂತಹಾ ಮನಸ್ಥಿತಿ ನಿಮ್ಮದು?? .

ನಿಮ್ಮ So called Standard Approach ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ.ನಂತರ ಇತರರನ್ನು ಟೀಕೆ ಮಾಡಿ.ಔಷಧಿ ಯಾವುದಾದರೂ ಏನು, ಒಳ್ಳೆದೆ ಎಂದು ಬಾಯಿಮಾತಿನಲ್ಲಿ ತೇಪೆ ಹಚ್ಚುವುದು ಬೇಡ.ನಿಮ್ಮ HCQ , Plasma Therapy ಗೆ‌ ಎಷ್ಟು ಬೇಗ ಅನುಮತಿ‌ ಸಿಕ್ಕಿತು?! ಅದೆಲ್ಲಾ ನಿಮ್ಮ Parameters fulfill ಆಗಿ ಬಂದದ್ದು‌ ಅಲ್ವಾ ? ಅದೇ ವೇಗ‌ ಆಯುರ್ವೇದ ಔಷಧಿಗಳಿಗೆ ಸಿಗುತ್ತಿದೆಯೇ?? ಹೇಳಿ.. ಅಲೋಪತಿಯವರು ಪ್ರಶ್ನಾತೀತರ? ನಿಮ್ಮಿಂದಲೇ ಎಲ್ಲಾ ‌ಎಂಬುದನ್ನು ಮೊದಲು ಬಿಡಿ.ಇಷ್ಟು ಬೇಗ ಅವರನ್ನು ತೆಗಳುವುದು ಉಚಿತವಲ್ಲ.ಅದೂ ಕೂಡ ಡ್ರೋನ್ ಪ್ರತಾಪ್ ಗೆ ಹೋಲಿಸುವುದು ಶತಮೂರ್ಖತನ. ಸಂಶೋಧನೆಗೆ ಸಮಾನ ಅವಕಾಶಗಳನ್ನು ಕೊಡಿ.ವಿಳಂಬ ಮಾಡಬೇಡಿ.ಕಾನೂನು ಸಡಿಲಿಸಿ.ಪಾರದರ್ಶಕವಾಗಿ ಮುಕ್ತ ಅವಕಾಶ ನೀಡಿ.ನಿಮ್ಮ ಅಸಂಬದ್ಧ Protocol ಗಳಿಂದಲೇ ಇಷ್ಟೆಲ್ಲಾ ಅವಾಂತರ ಗೊಂದಲಗಳಾಗುತ್ತಿರುವುದು..ಒಂದು ಆಶಾಕಿರಣ ಮೂಡುತ್ತಿರುವಾಗ ಅದನ್ನು ಹತ್ತಿಕ್ಕುವುದು ಎಷ್ಟು ಸರಿ??

ಅಲೋಪತಿ ಗೆ ಒಂದು ನೀತಿ, ಆಯುರ್ವೇದ ಕ್ಕೆ ಒಂದು ನೀತಿ.ಒಂದು ಪದ್ಧತಿಯನ್ನು ಬಳಸದೆ,ಪ್ರಯೋಗಿಸದೆ ಸರಿಯಾಗಿ ಅವಕಾಶವೇ ನೀಡದೆ ಆ ಪದ್ಧತಿಯಿಂದ ಗುಣಪಡಿಸಲು ಸಾಧ್ಯವೇ ಇಲ್ಲವೇ ಎಂದು ಹೇಗೆ ತಿಳಿಯುತ್ತದೆ?? ಸಿಕ್ಕ ಸಣ್ಣ ಪುಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೂ ಅದು ನಿಮಗೆ ನಗಣ್ಯ ಅಲ್ಲವೇ?! ಒಂದನ್ನು ಔಷಧಿ ಎಂದು ಒಪ್ಪಿಕೊಳ್ಳಲು ನೀವು Evidence ಇಲ್ಲದಿದ್ದರೆ ನಂಬುವುದಿಲ್ಲ . ಹಾಗಾದರೆ ಕಜೆ ಅವರ‌ ಔಷಧಿ ಕೊರೊನಾ ಗುಣಪಡಿಸಲಾರದು ಎಂದು ಹೇಳಲು ನಿಮ್ಮ ಬಳಿ ಯಾವ ಸಾಕ್ಷ್ಯಾಧಾರ ಇದೆ??ಆಯುಷ್ ಇಲಾಖೆ ಕೊವಿಡ್ಗಾಗಿ ಆಯುಷ್ ವೈದ್ಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.ಅದರಲ್ಲಿ ಕೊವಿಡ್ ನ ಯಾವ ಯಾವ ಹಂತದವರಿಗೆ ಯಾವ ಯಾವ ಔಷಧಿ ಗಳನ್ನು ನಿಗದಿ ಮಾಡಿದೆ.ಆದರೆ ಇದು ಹೆಸರಿಗಷ್ಟೇ.ವೆಬ್ಸೈಟ್ ನಲ್ಲಿ ಅಷ್ಟೇ ಕಾಣಬಹುದು.ಯಾವ ಆಯುರ್ವೇದ ವೈದ್ಯರಿಗೂ ಈ ಆದೇಶ ತಲುಪಿಲ್ಲ.ಎಷ್ಟೋ ಜನರಿಗೆ ಇದು ತಿಳಿದೇ ಇಲ್ಲ.ಹಾಗಾದರೇ ಈ‌ ಮಾರ್ಗಸೂಚಿ ಯಾರಿಗಾಗಿ?? ಆಯುಷ್ ಚಿಕಿತ್ಸೆ ಬಯಸುವವರಿಗೆ ಆಯುಷ್ ಆಸ್ಪತ್ರೆಗಳಲ್ಲಿ ಇದನ್ನು Standard Treatment ಅಂತ ನೀಡಲು ಏನು ತೊಂದರೆ ?? ಸರ್ಕಾರಗಳಿಗೆ ಆಯುಷ್ ಆಸ್ಪತ್ರೆಗಳು ಕೊವಿಡ್ ಕೇರ್ ಸೆಂಟರ್ ಮಾಡಲು ಬೇಕು ಆದರೆ ಆಯುಷ್ ಚಿಕಿತ್ಸೆ ಬೇಡ !! ಕಷಾಯ ಬೇಕು, ಚಿಕಿತ್ಸೆ ಬೇಡ!! ಈ ರೀತಿ ಮಾಡಿದರೆ ಸರ್ಕಾರ ದ‌ ಹೊರೆ, ಕೊವಿಡ್ ವಾರಿಯರ್ಸ್ ಹೊರೆ ಕಡಿಮೆ ಆಗುವುದಿಲ್ಲವೇ?? ಇನ್ನಷ್ಟು ಯಶಸ್ವಿಯಾಗಿ ಪರಿಸ್ಥಿತಿ ನಿಭಾಯಿಸಬಹುದಲ್ಲವೇ ?! ಸರ್ಕಾರ ಯಾಕೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ.ಆಯುರ್ವೇದವನ್ನು ಒಪ್ಪಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ ಎಂದೆನಿಸುತ್ತದೆ.

ಹಾಗಾದರೆ ಆಯುಷ್ ಇಲಾಖೆ ಏನೂ ಮಾಡುತ್ತಿಲ್ಲವೇ??
ಆಯುಷ್ ಇಲಾಖೆ ಮೊದಲು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿ ಬಿಡುಗಡೆ ಮಾಡಿತು.ನಂತರ 4 ಔಷಧಿಗಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸುತ್ತೇವೆ ಎಂದು ಘೋಷಿಸಿದರು.ಇಂದಿಗೂ ಟ್ರಯಲ್ ನಡೆಯುತ್ತಿದೆ.ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ವ್ಯಾಕ್ಸಿನ್ಗಳ ಬಗ್ಗೆ ಆಗುವಷ್ಟು ಸುದ್ದಿ ಈ ಆಯುರ್ವೇದ ದ ಟ್ರಯಲ್ಗಳು ಸುದ್ದಿ ಆಗುವುದೇ‌ ಇಲ್ಲ. ದೇಶದ ಇನ್ನೂ ಹಲವೆಡೆ ಸಂಶೋಧನೆ ನಡೆಸುತ್ತಿರುವುದಾಗಿ ಕೆಲವು ವರದಿಗಳಾಯಿತು.ಅದರ ಈಗಿನ Status ಏನು,ಯಾರಿಗೂ ತಿಳಿದಿಲ್ಲ. ಅದೇ Vaccine ನದ್ದಾದರೆ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿ ತಿಳಿಯುತ್ತದೆ ನೋಡಿ. ದೇಶದ ಹಲವಾರು ಕಡೆ ಆಯುರ್ವೇದ ಚಿಕಿತ್ಸೆ ಇಂದ ಗುಣಮುಖರಾದ ಉದಾಹರಣೆಗಳಿವೆ.. ತಮಿಳುನಾಡಿನಲ್ಲಿ ಸಿದ್ಧ ವೈದ್ಯಕೀಯ ಪದ್ಧತಿಯಿಂದ ಸುಮಾರು ಆರು ಸಾವಿರಕ್ಕೂ ಹೆಚ್ಚು ಕೊರೊನಾ ರೋಗಿಗಳನ್ನು ಗುಣಪಡಿಸಲಾಗಿದೆ. ಅಲ್ಲದೆ ಚೆನ್ನೈನಲ್ಲಿ ಡಾ.ಪಿ.ಎಲ್.ಟಿ.ಗಿರಿಜಾ ಎಂಬವರು ಟೆಲಿಮೆಡಿಸಿನ್ ಮೂಲಕ 150 ಹೆಚ್ಚು ಕೊವಿಡ್ ರೋಗಿಗಳನ್ನು ಕೇವಲ ಆಯುರ್ವೇದ ಔಷಧಿಗಳಿಂದ ಗುಣಪಡಿಸಿದ್ದಾರೆ. ಅಲ್ಲದೆ ದೇಶದ ಹಲವಾರು ಕಡೆಗಳಲ್ಲಿ ಖಾಯಂ ಆಯುರ್ವೇದ ಪೇಷಂಟ್ ಗಳು ಹಾಗೂ ಕೆಲವು ಕಡೆ ಅಲೋಪತಿ ವೈದ್ಯರ ಸಲಹೆ ಮೇರೆಗೆ ಕೂಡ ಕೊವಿಡ್ ಗೆ ಆಯುರ್ವೇದ ಚಿಕಿತ್ಸೆ ಪಡೆದಿದ್ದಾರೆ. .ಕರ್ನಾಟಕದಲ್ಲಿ ಸ್ವತಃ ಸಚಿವ ಸಿ.ಟಿ ರವಿಯವರು ಕಜೆ‌ಯವರ ಔಷಧಿಯಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದರು.

ಸಾಮಾನ್ಯ ಜನರಿಗೆ ಇದೇ ಪ್ರಶ್ನೆ ಕಾಡುತ್ತಿರುವುದು.ದೊಡ್ಡ ದೊಡ್ಡವರು ಆಯುರ್ವೇದ ಚಿಕಿತ್ಸೆ ಪಡೆಯಬಹುದಾದರೆ ಸಾಮಾನ್ಯ ಪ್ರಜೆಗೆ ಆ ಹಕ್ಕು ಯಾಕಿಲ್ಲ??? ಸಂಶೋಧನೆ ಆಗುತ್ತಿರುವ ಔಷಧಿಗಳನ್ನು ಬಿಡಿ ಸ್ವಾಮಿ,ನೀವು ಗುಣ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಹಾಗೆ ಆಯುಷ್ ಅವರಿಗೂ ಅವಕಾಶ ನೀಡಿ.ಸಮಸ್ಯೆ ಏನು?
ಇನ್ನೂ ಕೇರಳದಲ್ಲಿ, ಗುಜರಾತ್ ನಲ್ಲಿ Quarantine ನಲ್ಲಿರುವವರಿಗೆ ಆಯುರ್ವೇದ ಔಷಧಿ ನೀಡಲಾಯಿತು.ಇದು ಬಹುತೇಕ ಯಶಸ್ವಿಯಾಗಿದೆ. ಬಹುತೇಕ ಜನರ ವರದಿಗಳು Negative ಆಗಿದ್ದು Positive ಆದವರೂ ಸಹ 3-4 ದಿನದಲ್ಲಿ ಗುಣಮುಖರಾಗಿದ್ದಾರೆ.ಹೀಗೆ ಆಯುರ್ವೇದ ದೇಶದ ಹಲವೆಡೆ ಕೊರೊನಾ ತಡೆಗಟ್ಟಲು ಹಾಗೂ ಚಿಕಿತ್ಸೆ ಆಗಿ ಯಶಸ್ವಿಯಾಗಿದ್ದರೂ ಇದನ್ನು ಆಯುಷ್ ಇಲಾಖೆ ಯಾಕೆ ಮಾನ್ಯ ಮಾಡುತ್ತಿಲ್ಲ? ಹೆಮ್ಮೆಯಿಂದ ಘೋಷಿಸಲು ಏನು ಸಮಸ್ಯೆ?? ಆಯುಷ್ ಮಂತ್ರಿಗಳು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಆಯುರ್ವೇದದಿಂದ ಕೊವಿಡ್‌ ಗೆದ್ದರು ಎಂದು ಹೇಳಿದ್ದರು.ನಂತರ ಚಾರ್ಲ್ಸ್ ಅವರು ಇದನ್ನು ತಳ್ಳಿಹಾಕಿದಾಗ ಪೇಚಿಗೆ ಸಿಲುಕಿಕೊಂಡರು.ಅದೇ ನಮ್ಮ ಭಾರತದಲ್ಲಿ ಆಯುರ್ವೇದ ದ Success Stories ಹೇಳಲು ಯಾಕೆ ಮುಂದಾಗುತ್ತಿಲ್ಲ?? ಹಾಗಾದರೆ ಇದನ್ನು ಎಲ್ಲಾ Quarantine Center ಗಳಲ್ಲಿ ಅನುಸರಿಸಿದರೆ ಕೊರೊನಾ ನಿಯಂತ್ರಣವನ್ನು ಇನ್ನಷ್ಟು ಯಶಸ್ವಿಯಾಗಿ ಮಾಡಬಹುದಲ್ಲವೇ?? ಇನ್ನು ದೆಹಲಿಯ AIIA ( All India Institute of Ayurveda ) ದಲ್ಲಿ ಕೊರೊನಾಕ್ಕೆ ಉಚಿತ ಆಯುರ್ವೇದ ಚಿಕಿತ್ಸೆ ನೀಡಿದ್ದಾರೆ.ಕೇಳಲು ಖುಷಿ ಆಗುತ್ತದೆ. ಆದರೆ ಇದು ದಿಲ್ಲಿಯಿಂದ ಹಳ್ಳಿಗೆ ತಲುಪುವುದು ಯಾವಾಗ ಸ್ವಾಮಿ ?? ಇಷ್ಟೆಲ್ಲಾ ಉದಾಹರಣೆಗಳು ಕಣ್ಣಮುಂದೆ ಇದ್ದರೂ ಆಯುರ್ವೇದ ಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ.ಕಾರಣವೇನೆಂದು ದೇವ್ರೇ ಬಲ್ಲ.

ಸರ್ಕಾರದ‌ ಧೋರಣೆಗಳು ಹೇಗಿದೆ ಎಂದರೆ ಕೋಲು ಮುರಿಯಬಾರದು,ಹಾವೂ ಸಾಯಬಾರದು ಎಂಬಂತಿದೆ.ಆಯುರ್ವೇದಕ್ಕೆ ಬೆಂಬಲ ಕೊಟ್ಟಿಲ್ಲವೆಂದೂ ಆಗಬಾರದು,ಅಲೋಪತಿಯನ್ನೂ ಬಿಟ್ಟೂ ಕೊಡಬಾರದು.ಟ್ರಯಲ್ಗಳು ನಡೆಯುತ್ತಿವೆ ನಿಜ ಆದರೆ ಏಕಿಷ್ಟು ವಿಳಂಬ?? ಇನ್ನು ಯಾವಾಗ ಆಯುರ್ವೇದವನ್ನು ಒಪ್ಪಿಕೊಳ್ಳುತ್ತೀರಿ ಸ್ವಾಮಿ?? ರಷ್ಯಾ ದೇಶ ಲಸಿಕೆ ಘೋಷಣೆ ಮಾಡಿದ್ದೇ ತಡ ಇಡೀ ವಿಶ್ವವೇ ಸಂಭ್ರಮಿಸಿತು.ನೂರಾರು ದೇಶಗಳು ರಷ್ಯಾದ ಲಸಿಕೆಗಾಗಿ ಬೇಡಿಕೆ ಇಟ್ಟಿತು.ಆದರೆ ಇದು ಪೂರ್ಣ ಪ್ರಮಾಣದಲ್ಲಿ ಸಂಶೋಧನೆ ಆಗಿರಲಿಲ್ಲ.ವಿಶ್ವ ಆರೋಗ್ಯ ಸಂಸ್ಥೆ ಈ‌ ಲಸಿಕೆಯ Safety ಬಗ್ಗೆ ಇನ್ನೂ ಖಚಿತಪಡಿಸಲು ರಷ್ಯಾಗೆ ಹೇಳಿತು. ಆದರೆ ನಮ್ಮ ದೇಶದಲ್ಲಿ ಆಯುರ್ವೇದದಲ್ಲಿ ಗುಣಪಡಿಸಿದರೂ ಸಹ ಇದನ್ನು ಒಪ್ಪಿಕೊಳ್ಳಲು ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ .ವ್ಯಾಕ್ಸಿನ್ ಗಿಂತ ಮೊದಲು ಬೇರೆ ಔಷಧಿಗಳು ಬರಬಾರದು ಎಂಬ ಹುನ್ನಾರ ಅಡಗಿದೆಯಾ ಎಂದು ಸಂಶಯ ಮೂಡುತ್ತಿದೆ.ವ್ಯಾಕ್ಸಿನ್ ಬಂದನಂತರ ಆಯುರ್ವೇದವೂ ಯಶಸ್ವಿಯಾಗಬಲ್ಲದೂ ಎಂದು ಹೇಳಿದರೆ , ಆಗ ಆಯುರ್ವೇದ ಯಾರಿಗೆ ಬೇಕು???
ಪ್ರಧಾನಿಗಳು ಹೇಳಿದಂತೆ ಈ ಜಾಗತಿಕ ಸಮಸ್ಯೆಯನ್ನು ಒಂದು ಅವಕಾಶವಾಗಿ ಬಳಸಬಹುದಾಗಿತ್ತು.ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಬೆಂಬಲಿಸಿ ಕೊರೊನಾ ನಿಯಂತ್ರಿಸಲು ಯಶಸ್ವಿಯಾಗಿದ್ದರೆ ಭಾರತ ವಿಶ್ವಕ್ಕೆ ಮಾದರಿ ಆಗುತ್ತಿತ್ತು. ಆಯುರ್ವೇದದ‌ ಶಕ್ತಿ ಸಾಮರ್ಥ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಬಹುದಿತ್ತು.ಯಾಕೆ ಹೀಗೆ ಆಗುತ್ತಿಲ್ಲ ಎಂಬುದೇ‌ ಯಕ್ಷ ಪ್ರಶ್ನೆ?!
ಇನ್ನಾದರೂ ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಮುಕ್ತ ಅವಕಾಶ ಸಿಗಬೇಕು.ಇದಕ್ಕೆ ಸಂಬಂಧಿಸಿದ ಕಾನೂನುಗಳು, ನಿಯಮಗಳು, Protocol ಗಳೂ ಆಯುರ್ವೇದ ದ ಏಳ್ಗೆಗೆ ಪೂರಕವಾಗಿ ಇರುವಂತೆ ಬದಲಾಯಿಸಬೇಕು.ಇಲ್ಲದಿದ್ದಲ್ಲಿ ಆಯುರ್ವೇದ ಕೊರೊನಕ್ಕೆ ಅಧಿಕೃತ ಮದ್ದು ಆಗಲು ಸಾಧ್ಯವಿಲ್ಲ,ಆಗಲು ಕೆಲವರೂ ಬಿಡುವುದೂ ಇಲ್ಲ.ಅದು ಕೇವಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳಾಗಿ ಅಷ್ಟೇ ಉಳಿದುಬಿಡುತ್ತದೆ.ಇತ್ತೀಚೆಗೆ Immunity booster ಗಳ ಮೇಲೂ ಅಲೋಪತಿಯವರು ಖ್ಯಾತೆ ತೆಗೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಬೇಧಗಳನ್ನು ಮರೆತು , ಮೇಲು ಕೀಳುಗಳನ್ನು ಬಿಟ್ಟು ಒಂದಾಗಿ ಕೆಲಸ ಮಾಡಬೇಕಾಗಿದ್ದರೂ ಅದು ಆಗದೆ ಇರುವುದು ದುಃಖಕರ.

ಆದರ್ಶ ಪರಕ್ಕಜೆ
ಆಯುರ್ವೇದ ವಿದ್ಯಾರ್ಥಿ

- Advertisement -

Related news

error: Content is protected !!