Saturday, April 20, 2024
spot_imgspot_img
spot_imgspot_img

ಈ ಪಾನೀಯಗಳನ್ನು ಕುಡಿದರೆ ಹೊಟ್ಟೆ ಬೊಜ್ಜು ಬೇಗನೇ ಕರಗುತ್ತದೆ

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರಿಗೆ ದೇಹದ ತೂಕ ಹಾಗೂ ಹೊಟ್ಟೆಯ ಬೊಜ್ಜು ಇವೆರಡೂ ಕೂಡ, ದೊಡ್ಡ ತಲೆ ನೋವಿನ ಸಮಸ್ಯೆಯಾಗಿ ಕಾಡುತ್ತಿದೆ. ಅದರಲ್ಲೂ ಹೊಟ್ಟೆಯ ಬೊಜ್ಜಿನ ಸಮಸ್ಯೆ ಅಂತೂ ದೀರ್ಘಕಾಲದ ಕಾಯಿಲೆಯ ಹಾಗೆ, ಬೆನ್ನುಬಿಡದೆ, ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಕೆಲವರಿಗೆ ಇದು ಅನುವಂಶೀಯವಾಗಿ ಬಂದರೆ, ಇನ್ನೂ ಕೆಲವರು ತಮ್ಮ ಅನಾರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸಿಕೊಂಡು, ಈ ಸಮಸ್ಯೆಯನ್ನು ಬರಮಾಡಿಕೊಂಡು ಬಿಟ್ಟಿದ್ದಾರೆ!

ಆದರೆ ಹೊಟ್ಟೆಯಲ್ಲಿ ಒಮ್ಮೆ ಈ ಬೊಜ್ಜನ ಸಮಸ್ಯೆ ಕಾಣಿಸಿಕೊಂಡರೆ, ಅದನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ! ಹಾಗಂತ ಸಾಧ್ಯವಿಲ್ಲ ಎನ್ನುವ ಹಾಗಿಲ್ಲ, ಇದಕ್ಕಾಗಿ ಕಠಿಣ ಶ್ರಮ ಬೇಕಾ ಗುವುದು. ಸರಿಯಾಗಿ ಆಹಾರ ಪಥ್ಯ ಅನುಸರಿಸುವುದರ ಜೊತೆಗೆ, ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಆಗ ಖಂಡಿತವಾಗಿಯೂ ಹೊಟ್ಟೆಯ ಬೊಜ್ಜು ಕಡಿಮೆ ಮಾಡಬಹುದು.

ಇನ್ನೂ ಯಾವುದೇ ಕಾರಣಕ್ಕೂ ಕೂಡ ಹೊಟ್ಟೆಯ ಬೊಜ್ಜನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ! ಯಾಕೆಂ ದರೆ, ಇದೇ ಬೊಜ್ಜಿನ ಸಮಸ್ಯೆಗಳಿಂದಾಗಿ, ಮುಂದಿನ ದಿನಗಳಲ್ಲಿ ಅನಾರೋಗ್ಯಕಾರಿ ಆರೋಗ್ಯ ಸಮಸ್ಯೆಗಳು ಕಾಡುವ ಅಪಾಯ ಹೆಚ್ಚಿರುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ, ಪ್ರಕಾರ ದೇಹದಲ್ಲಿ ಬೊಜ್ಜು ಶೇಖರಣೆ ಜಾಸ್ತಿ ಆಗುತ್ತಾ ಹೋದಂತೆ, ಮುಂದಿನ ದಿನಗಳಲ್ಲಿ ಮಧು ಮೇಹ, ಹೃದಯದ ಕಾಯಿಲೆ, ಕ್ಯಾನ್ಸರ್ ನಂತಹ ಮಾರಕ ಸಮಸ್ಯೆ ಕೂಡ ಕಾಡುವ ಅಪಾಯ ಹೆಚ್ಚಿರುತ್ತದೆಯಂತೆ….

ದೇಹದಲ್ಲಿನ ಬೊಜ್ಜು ಒಮ್ಮೆ ಆವರಿಸಿಕೊಂಡರೆ ಅದನ್ನು ಅಷ್ಟು ಸುಲಭದಲ್ಲಿ ಕರಗಿಸಲು ಸಾಧ್ಯ ವಿಲ್ಲ. ಹೀಗಾಗಿ ಬೊಜ್ಜು ಬರದಂತೆ ತಡೆಯುವುದೇ ಅತೀ ಅಗತ್ಯ. ಇದಕ್ಕಾಗಿ ಸರಿಯಾದ ವ್ಯಾಯಾ ಮದ ಜೊತೆಗೆ ಆರೋಗ್ಯಕಾರಿ ಜೀವನಶೈಲಿ ಹಾಗೂ ಆಹಾರಪದ್ಧತಿಯನ್ನು ಅನುಸರಿಸುವುದು ಅತ್ಯಗತ್ಯ.
ಒಂದು ವೇಳೆ ಈಗಾಗಲೇ ದೇಹದಲ್ಲಿ ಬೊಜ್ಜು ಆವರಿಸಿ ಕಷ್ಟುಪಡುತ್ತಿರುವಿರಾದರೆ, ಇಂದಿನ ಲೇಖ ನದಲ್ಲಿ ಬೊಜ್ಜು ಕರಗಿಸಲು ಯಾವೆಲ್ಲಾ ಪಾನೀಯಗಳನ್ನು ಸೇವಿಸಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೀರಿಗೆ ನೀರು

ಜೀರಿಗೆ ಕಾಳುಗಳ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ. ನಾವು ದಿನನಿತ್ಯ ತಯಾರು ಮಾಡುವ ಅಡುಗೆ ಗಳಲ್ಲಿ ಇದನ್ನು ಬಳಸುತ್ತೇವೆ. ತನ್ನಲ್ಲಿ ವಿಶೇಷವಾದ ಪರಿಮಳ ಹಾಗೂ ರುಚಿಯನ್ನು ಒಳಗೊಂಡಿ ರುವ ಈ ಜೀರಿಗೆ ಕಾಳುಗಳನ್ನು, ಅಡುಗೆಯಲ್ಲಿ ಬಳಸುವುದರಿಂದ, ಆಹಾರದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

ಆದರೆ ಈ ಪುಟ್ಟ ಕಾಳುಗಳ ಪ್ರಯೋಜನಗಳು, ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ! ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಆರೋಗ್ಯಕರವಾಗಿ ದೇಹದ ಬೊಜ್ಜಿನ ಪ್ರಮಾಣವನ್ನು ತಗ್ಗಿಸುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಜೀರಿಗೆ ಕಾಳಿನಲ್ಲಿ ಕಂಡು ಬರುತ್ತದೆ.

ಹೀಗೆ ಮಾಡಿ
ಒಂದು ಟೀ ಚಮಚ ಜೀರಿಗೆಯನ್ನು, ಒಂದು ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಹಾಕಿ, ಆಮೇಲೆ ಬೆಳಗ್ಗೆ ಎದ್ದ ಕೂಡಲೇ, ಈ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕು. ಹೀಗೆ ಪ್ರತಿದಿನ ಮಾಡುತ್ತಾ ಹೋದರೆ, ನಿಮ್ಮ ಹೊಟ್ಟೆಯ ಭಾಗದ ಬೊಜ್ಜು ಸಂಪೂರ್ಣ ವಾಗಿ ಕರಗುವುದರ ಜೊತೆಗೆ, ದೇಹದ ತೂಕ ಕೂಡ ಕಡಿಮೆ ಆಗುತ್ತದೆ.

ನಿಂಬೆ ಹಣ್ಣಿನ ಚಹಾ

ಇತ್ತೀಚಿನ ದಿನಗಳಲ್ಲಿ ನಿಂಬೆ ಹಣ್ಣಿನ ಚಹಾಕ್ಕೆ ತುಂಬಾನೇ ಡಿಮ್ಯಾಂಡ್. ಇದಕ್ಕೆ ಮುಖ್ಯ ಕಾರಣ ದೇಹದ ತೂಕ ಇಳಿಸಿಕೊಳ್ಳುವವರಿಗೆ, ಹಾಗೂ ಬೊಜ್ಜಿನ ಸಮಸ್ಯೆಯನ್ನು ಕರಗಿಸುವವರಿಗೆ ಈ ನಿಂಬೆ ಹಣ್ಣಿನ ಚಹಾ ತುಂಬಾನೇ ಪರಿಣಾಮಕಾರಿ ಎಂದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಕೂಡ ಸಿಗುವುದರಿಂದ, ಬೊಜ್ಜಿನ ಸಮಸ್ಯೆ ಹೆಚ್ಚಾಗದಂತೆ ನೋಡಿ ಕೊಳ್ಳುತ್ತದೆ.
ಇನ್ನು ಮುಖ್ಯವಾಗಿ ಈ ಚಹಾ ತಯಾರಿಸುವ ವೇಳೆ, ನಿಂಬೆ ಹಣ್ಣಿನ ರಸವನ್ನು ಬಳಸುವುದರಿಂದ, ಇದರಿಂದ ಸಾಕಷ್ಟು ಪ್ರಯೋಜನಗಳು ಸಿಕ್ಕಂತೆ ಆಗುತ್ತದೆ.

ವಿಶೇಷವಾಗಿ ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಯಥೇಚ್ಛವಾಗಿ ಸಿಗುವುದರ ಜೊತೆಗೆ, ನಾರಿನಾಂಶದ ಪ್ರಮಾಣ ಕೂಡ ಹೇರಳವಾಗಿ ಕಂಡು ಬರುವುದರಿಂದ, ಹೊಟ್ಟೆ ಹಸಿವನ್ನು ದೂರ ಮಾಡಿ, ದೇಹದ ತೂಕವನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತವೆ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೊಂದು ಕಪ್ ನಿಂಬೆ ಚಹಾ ಅಥವಾ ಲೆಮನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಆದರೆ ಒಂದು ಅಂಶ ನೆನಪಿನಲ್ಲಿ ಇಟ್ಟುಕೊಳ್ಳಿ, ಯಾವುದೇ ಕಾರಣಕ್ಕೂ ಕೂಡ, ಈ ಚಹಾ ರೆಡಿ ಮಾಡುವಾಗ, ಸಕ್ಕರೆಯನ್ನು ಬೆರೆಸಬೇಡಿ! ಏಕೆಂದರೆ ಸಕ್ಕರೆ ಅಂಶ, ದೇಹದ ತೂಕವನ್ನು ಹಾಗೂ ಬೊಜ್ಜಿನ ಸಮಸ್ಯೆಯನ್ನು ಹೆಚ್ಚು ಮಾಡುವ ಅಪಾಯ ಇರುತ್ತದೆ.

ಗ್ರೀನ್ ಟೀ

ಇಂದಿನ ದಿನಗಳಲ್ಲಿ ಗ್ರೀನ್ ಟೀ ಕುಡಿಯುವವರ ಸಂಖ್ಯೆ ತುಂಬಾನೇ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಆರೋಗ್ಯ ವೃದ್ಧಿಸುವ ಔಷಧೀಯ ಗುಣಗಳು ಹಾಗೂ ಪೌಷ್ಟಿಕ ಸತ್ವಗಳು ಕೂಡ ಸಿಗುವುದರ, ಜೊತೆಗೆ ದೇಹದ ತೂಕವನ್ನು ಇಳಿಸುವಲ್ಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ.
ಹೀಗಾಗಿ ಪ್ರತಿದಿನ ಮುಂಜಾನೆ ಗ್ರೀನ್ ಟೀ ಕುಡಿಯುವ, ಅಭ್ಯಾಸವನ್ನು ಮಾಡುತ್ತಾ ಹೋದರೆ, ಕ್ರಮೇ ಣವಾಗಿ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಲು ಸಾಕಷ್ಟು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು

ಆಹಾರಕ್ಕೆ ಸುವಾಸನೆ ಹಾಗೂ ರುಚಿ ಎರಡನ್ನೂ ನೀಡುವಂತಹ ಏಲಕ್ಕಿ, ತುಂಬಾನೇ ದುಬಾರಿ ಸಾಂಬಾರ ಪದಾರ್ಥ ಎಂದೇ ಹೆಸರು ಪಡೆದು ಕೊಂಡಿದೆ. ಏಲಕ್ಕಿಯನ್ನು ಸಾಮಾನ್ಯವಾಗಿ ವಿಶೇಷ ರೆಸಿಪಿಗಳಲ್ಲಿ, ರೈಸ್‌ಬಾತ್‌ಗಳಲ್ಲಿ, ಸಿಹಿತಿಂಡಿಗಳಲ್ಲಿ ಹಾಗೂ ಚಹಾ ಮಾಡುವಾಗ ಕೂಡ ಇದನ್ನು ಬಳಸಲಾಗುತ್ತದೆ.
ಏಲಕ್ಕಿಯನ್ನು ಮಿತವಾಗಿ ನಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವುದರಿಂದ, ಅಜೀರ್ಣ, ಕೆಮ್ಮು ಮತ್ತು ಶೀತದ ಸಮಸ್ಯೆ ನಿವಾರಣೆ ಮಾಡುವುದರ ಜೊತೆಗೆ, ದೇಹದ ತೂಕ ಇಳಿಸಿ, ಸಲೀಸಾಗಿ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ಕೂಡ ಕರಗಿಸಿಕೊಳ್ಳಬಹುದು.

ಹೀಗೆ ಮಾಡಿ
ಮೊದಲಿಗೆ, ನಾಲ್ಕೈದು ಏಲಕ್ಕಿಯ ಸಿಪ್ಪೆ ತೆಗೆದು ಒಳಗಿನ ಬೀಜಗಳನ್ನು ಹೊರಗೆ ತೆಗೆದುಕೊಳ್ಳಿ.
ಇನ್ನು ಈ ಏಲಕ್ಕಿಯ ಒಳಗಿನ ಬೀಜಗಳನ್ನು ಒಂದು ಲೋಟ ನೀರಿನಲ್ಲಿ, ರಾತ್ರಿ ಪೂರ್ತಿ ನೆನೆಹಾಕಿ
ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ, ಈ ನೀರನ್ನು ಕುಡಿಯಿರಿ.

- Advertisement -

Related news

error: Content is protected !!