Sunday, July 19, 2026
spot_imgspot_img
spot_imgspot_img

ಕಳ್ಳತನ ಪ್ರಕರಣದ ಆರೋಪಿಗಳಿಗೆ ದಂಡ ಸಹಿತ ಜೈಲು ಶಿಕ್ಷೆ

- Advertisement -
- Advertisement -

ಪುತ್ತೂರು: ಬಲ್ನಾಡು ಗ್ರಾಮದ ಬಬ್ಬಿಲಿ ಎಂಬಲ್ಲಿ ಫೆ. 27/2022ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯವು 10,000 ದಂಡದೊಂದಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಆರೋಪಿಗಳಾದ ಮಹಮ್ಮದ್ ಅಶ್ರಫ್ ತಾರಿಗುಡ್ಡೆ ಮತ್ತು ಮಹಮ್ಮದ್ ಸಲಾಂ ಇವರಿಗೆ ನ.29ರಂದು ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ್ ವೈ.ಹೆಚ್ ಅವರು 3 ವರ್ಷಗಳ ಶಿಕ್ಷೆ ಮತ್ತು 10,000 ದಂಡ ಹಾಗೂ ದಂಡ ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ನೀಡಿ ಆದೇಶಿಸಿರುತ್ತದೆ.

ಸದ್ರಿ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರಾದ ಉಮೇಶ್ ಉಪ್ಪಳ್ಳಿಗೆರವರು ಚಾರ್ಜ್ ಶೀಟ್ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರು ಚೇತನಾದೇವಿ ವಾದ ಮಂಡಿಸಿದ್ದಾರೆ.

- Advertisement -

Related news

error: Content is protected !!