Sunday, July 19, 2026
spot_imgspot_img
spot_imgspot_img

‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! – ಡಿಸಿಎಂ ಪೋಸ್ಟ್ – ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಹಾ ದ್ರೋಹ : ಜೆಡಿಎಸ್ ಟೀಕೆ‌

- Advertisement -
- Advertisement -

ಬೆಂಗಳೂರು: ಸಿಎಂ ಗಾದಿ ಗುದ್ದಾಟ ತಾರಕಕ್ಕೇರಿರುವ ವೇಳೆ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ!” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಯೂ ನಡೆಯುತ್ತಿದೆ. ಈ ನಡುವೆ ಅದೇ ಪೋಸ್ಟ್ ಬಳಸಿ ಜೆಡಿಎಸ್ ಟೀಕಾ ಪ್ರಹಾರ ನಡೆಸಿದೆ.

ಎಕ್ಸ್ ಪೋಸ್ಟ್ ನಲ್ಲಿ ಜೆಡಿಎಸ್ ”ಗುಂಡಿ ಮುಚ್ಚುವುದಾಗಿ ಡೆಡ್ ಲೈನ್ ಕೊಟ್ಟು ಮಾತು ತಪ್ಪಿದ ಶೂರ. ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ರಾಜಧಾನಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದ ಸುಳ್ಳುಗಾರ. ಗಾರ್ಡನ್ ಸಿಟಿಯನ್ನು “ಗಾರ್ಬೇಜ್ ಸಿಟಿ” ಮಾಡಿರುವ ವಚನಭ್ರಷ್ಟ.’ನಮ್ಮ ನೀರು, ನಮ್ಮ ಹಕ್ಕು’ 2.5 ವರ್ಷವಾಯ್ತು ಕನ್ನಡಿಗರಿಗೆ ಮೇಕೆದಾಟು ನೀರು ಕೊಟ್ಟಿರಾ?” ಎಂದು ಪ್ರಶ್ನೆ ಮಾಡಿದೆ.

”ಪ್ರತಿ ತಿಂಗಳು ಗ್ಯಾರಂಟಿ ಕೊಡುತ್ತೇವೆ ಎಂದು ವಾಗ್ದಾನ ಕೊಟ್ಟಿದ್ದಷ್ಟೇ, ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಬರುತ್ತಿಲ್ಲ, ಯುವನಿಧಿ ಸದ್ದೇ ಇಲ್ಲ. ಮಾತು ತಪ್ಪಿರುವ, ತಪ್ಪುತ್ತಲೇ ಇರುವ ನಿಮ್ಮನ್ನು ಏನೆನ್ನಬೇಕು ? ಮಾತೆ ಪಾಲಿಸದ ಮಹಾ ಶೂರ! ವಚನಭ್ರಷ್ಟ” ಎಂದು ಟೀಕೆ ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ‘ಮಾತಿಗೆ ದೊಡ್ಡ ಶಕ್ತಿ (Word Power is World Power) ಇದೆ. ಆ ಮಾತನ್ನು ನಾವು ಎಲ್ಲಿಯೇ ಕೊಟ್ಟಿರಲಿ, ಅದನ್ನು ಉಳಿಸಿಕೊಂಡು ಹೋಗಬೇಕು. ಆ ಮಾತನ್ನು ಒಬ್ಬ ನ್ಯಾಯಾಧೀಶನಾಗಲಿ, ದೇಶದ ರಾಷ್ಟ್ರಪತಿಗಳಾಗಲಿ, ನಾನಾಗಲೀ, ನೀವಾಗಲಿ, ಅದನ್ನು ಮನೆಯಲ್ಲಾಗಲಿ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಸೂಚ್ಯವಾಗಿ ಹೇಳಿದ್ದರು.

ಎಕ್ಸ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ
https://x.com/JanataDal_S/status/1993947306996191488?s=20

- Advertisement -

Related news

error: Content is protected !!