Monday, August 3, 2026
spot_imgspot_img
spot_imgspot_img

ವಿಟ್ಲ: ಹಿರಿಯ ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ

- Advertisement -
- Advertisement -

ವಿಟ್ಲ: ಹಿರಿಯ ಪತ್ರಿಕಾ ವಿತರಕ, ಜಾತ್ರೆ ಸಂದರ್ಭದಲ್ಲಿ ಪ್ರಸಿದ್ದ ಸೋಜಿ ವ್ಯಾಪಾರಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಔಷಧಿ ಪಂಡಿತರ ವೇಷಧಾರಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದ ಜಗದೀಶ್‌ ಭಟ್ (86) ನಿಧಾನರಾಗಿದ್ದಾರೆ.

ಗಣೇಶ್‌ ಬೀಡಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಿಟ್ಲ ಕೂಜಪ್ಪಾಡಿ ನಿವಾಸಿ ಜಗದೀಶ್ ಭಟ್ ಅವರು ಬಳಿಕ ಹಲವು ವರ್ಷಗಳಿಂದ ಪತ್ರಿಕಾ ವಿತರಕರಾಗಿದ್ದರು. ವಿಟ್ಲ ಪಂಚಲಿಂಗೇಶ್ವರನ ಜಾತ್ರಾ ಸಂದರ್ಭ ದೇವಸ್ಥಾನದ ಆನೆ ಬಾಗಿಲು ಸಮೀಪ ಸೋಜಿ ವ್ಯಾಪಾರ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಳೆದ 50 ವರುಷ ದಿಂದ ವಿಟ್ಲ ಪರಿಸರದಲ್ಲಿ ದಿನ ಮುಂಜಾನೆ ದಿನಪತ್ರಿಕೆ ಯನ್ನು ಮಾರಾಟ ಮಾಡುತಿದ್ದ ಉದಯವಾಣಿ ಪೇಪರ್ ಭಟ್ರೇ ಎಂದು ಹೆಸರುವಾಸಿಯಾಗಿದ್ದರು.

ನವರಾತ್ರಿ ಹಬ್ಬದ ಸಂದರ್ಭ ಔಷಧಿ ಪಂಡಿತನ ವೇಷಧಾರಿಯಾಗಿ ನವರಾತ್ರಿ ಹಬ್ಬಕ್ಕೆ ಮೆರುಗು ನೀಡುತ್ತಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!